ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸಂಯೋಜಕರಾಗಿ ಡಾ. ಮೀರಾಮಣಿ ಆಯ್ಕೆ

0

ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ವರ್ಲ್ಡ್ ಆರ್ಕಿಯಾಲಜಿಕಲ್ ಕಾಂಗ್ರೆಸ್ ಜೂನ್ 22ರಿಂದ 28ರವರೆಗೆ ಆಯೋಜಿಸುತ್ತಿರುವ ಸಮ್ಮೇಳನಕ್ಕೆ ಡಾ. ಮೀರಾಮಣಿಯವರು ಸಂಯೋಜಕರಾಗಿ ಸೆಕ್ರೆಡ್ ನರೇಟಿವ್ಸ್ ಆಂಡ್ ರಿಚುವಲ್ ಎಕ್ಸ್ ಪ್ರೆಷನ್ಸ್ ಎಕ್ಸ್ ಪ್ಲೋರಿಂಗ್ ಸೌತ್ ಏಷಿಯಾಸ್ ಫೋಕ್ ಟ್ರೆಡಿಷನ್ಸ್ ಆಂಡ್ ಕಲ್ಚರಲ್ ಕಂಟಿನ್ಯೂಟಿ ಗೆ ಆಯ್ಕೆಯಾಗಿದ್ದಾರೆ.

ಅವರು ಸಮ್ಮೇಳನದಲ್ಲಿ ಡಿಜಿಟಲ್ ಪ್ರಿಸರ್ವೇಶನ್ ಆಂಡ್ ಕಲ್ಚರಲ್ ಹೆರಿಟೇಜ್ ಇನ್ ಇಂಡಿಯಾ ವಿತ್ ಸ್ಪೆಷಲ್ ರೆಫರೆನ್ಸ್ ಟು ಇನ್ಸ್ಟಿಟ್ಯೂಷನಲ್ ರೆಪೊಸಿಟರೀಸ್ ಇನ್ ಕರ್ನಾಟಕ ಸ್ಟೇಟ್ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ ಹಾಗೂ ಫೋಕ್ ಕಲ್ಚರ್ ಇನ್ ಇಂಡಿಯಾ ರಿಚುವಲ್ ಆಂಡ್ ಸ್ಪಿರಿಚುಯಲ್ ಪ್ರಾಕ್ಟೀಸ್ ಇನ್ ತುಳುನಾಡು; ತುಳುನಾಡಿನ ಸಂಸ್ಕೃತಿಯ
ಮೇಲೆ ಪ್ರಬಂಧ ಮಂಡಿಸಲಿದ್ದಾರೆ. ಇಲ್ಲಿ ಸುಮಾರು 70 ದೇಶಗಳ ಸಂಶೋಧಕರು ಭಾಗವಹಿಸಲಿದ್ದಾರೆ.

ಡಾ. ಮೀರಾ ಅವರು ಎಡಮಂಗಲ ಗ್ರಾಮದ ಆನಂದ ಪರ್ಲ ಅವರ ಪತ್ನಿ.