ಸುಳ್ಯದ ಪ್ರಿಮಲ್ ವೆನಿಷಾ ಡಿ.ಸೋಜಾಗೆ 558 ಅಂಕದೊಂದಿಗೆ 9062ನೇ ರ್‍ಯಾಂಕ್
ಸುಳ್ಯದ ಪ್ರಿಮಲ್ ವೆನಿಷಾ ಡಿ ಸೋಜಾ ಗೆ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ )- 2025 ರಲ್ಲಿ 700 ರಲ್ಲಿ 558 ಅಂಕದೊಂದಿಗೆ ಗುರುವಾಯನಕೆರೆ ಎಕ್ಸೆಲ್ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿ ರಾಷ್ಟ್ರೀಯ 9062 ರ್‍ಯಾಂಕ್ ಗಳಿಸಿದ್ದಾರೆ.















ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ಮರಿಯಾ ಕೃಪಾ ಟ್ರಾನ್ಸ್ ಪೋರ್ಟ್ ಮಾಲಕ ಪ್ರೇಮ್ ಪ್ರಕಾಶ್ ಮತ್ತು ಶ್ರೀಮತಿ ವೀಣಾ ಮೊಂತೆರೋ ದಂಪತಿಗಳ ಪುತ್ರಿಯಾಗಿರುವ ಪ್ರಿಮಲ್ ವನಿಷಾ ಡಿಸೋಜಾ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಮೂಡುಬಿದಿರೆ ಆಳ್ವಾಸ್ ಪಿ.ಯು.ಕಾಲೇಜಿನ ಹಳೆ ವಿದ್ಯಾರ್ಥಿನಿ. ಎಸ್.ಎಸ್.ಎಲ್.ಸಿ.ಯಲ್ಲಿ 625 ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದರು. ದ್ವಿತೀಯ ಪಿಯುಸಿಯಲ್ಲಿ 588 ಅಂಕ ಗಳಿಸಿದ್ದರು.










