ಗ್ರಾಹಕರಿಗೆ ಕಡಿಮೆದರಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವುದು ನಮ್ಮ ಕನಸು: ದೀಪಕ್ ರಾಜ್
ಹೊಸ ಉದ್ಯಮಗಳು ಹೆಚ್ಚು ಹೆಚ್ಚು ಬಂದರೆ ಸುಳ್ಯ ಬೆಳೆಯುತ್ತದೆ : ಭಾಗೀರಥಿ ಮುರುಳ್ಯ
ಸುಳ್ಯಕ್ಕೆ ಏನಾದರೂ ಹೊಸತನವನ್ನು ಕೊಡುವಂತ ಕನಸು ಮತ್ತು ಚಿಂತನೆಯಾಗಿತ್ತು : ಮುನ್ವರ್ ಅಬೂಭಕ್ಕರ್
ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿಯಿರುವ ಸುಳ್ಯ ಸೆಂಟರ್ ನಲ್ಲಿ ಅತ್ಯಾಧುನಿಕ ಶೈಲಿಯನ್ನು ಒಳಗೊಂಡ ವಿನೂತನ ಶೈಲಿಯ ಸಸ್ಯಹಾರಿ ಖಾದ್ಯಗಳಿಗಾಗಿ ಜೂ. 14 ರಂದು ಶುಭಾರಂಭಗೊಂಡುತು.
ವೆಜ್ಸ್ ದ ಪ್ರಿಮಿಯಮ್ ವೆಜ್
ರೆಸ್ಟೋರೆಂಟ್ ನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ರೆಸ್ಟೋರೆಂಟ್ ನ ಪುಡ್ ಕೌಂಟರನ್ನು ಉದ್ಘಾಟಿಸಿದರು.
ಸೂಡಾ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ರೆಸ್ಟೋರೆಂಟ್ ನ ಅಡುಗೆ ಕೋಣೆಯನ್ನು ಉದ್ಘಾಟಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು.
ಸುಳ್ಯ ಸೆಂಟರ್ ಆಡಳಿತ ನಿರ್ದೇಶಕ ಮಹಮ್ಮದ್ ಇಬ್ರಾಹಿಂ ಪಾವೂರು,ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆಎಸ್,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,ಅನಿವಾಸಿ ಉದ್ಯಮಿ ಮನ್ವರ್ ಅಬೂಭಕ್ಕರ್, ಸುಳ್ಯ ರೈತ ಮಕ್ಕಳ ಪರಿಷತ್ ಸಂಚಾಲಕ ಅಶೋಕ ಎಡಮಲೆ,ಬಿಎಂಎಸ್ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯಪ್ರಕಾಶ್, ಪದ್ಮಶ್ರೀ ಅಸೋಸಿಯೇಟ್ಸ್ ನ ಕೃಷ್ಣ ಎಂ ಆಳಕೆ,ಉದ್ಯಮಿ ರಂಜಿತ್ ಪೂಜಾರಿ, ಹಾಜಿ ಅಬ್ದುಲ್ ಖಾದರ್ ಕೆರಮೂಲೆ, ಹಾಜಿ ಇಬ್ರಾಹಿಂ ಕತ್ತಾರ್,ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವೇಜ್ ರೆಸ್ಟೋರೆಂಟ್ ಉದ್ಘಾಟನೆ ಸಮಾರಂಭದ ಪ್ರಯುಕ್ತ ಇನ್ಸ್ಟಾಗ್ರಾಮ್ ಪಾಲೋ ಮಾಡಿ ಅದೃಷ್ಟ ಅತಿಥಿಯಾಗಿ ಕೆವಿಜಿ ಮೆಡಿಕಲ್ ಕಾಲೇಜು ಪಿಸಿಯೊತೆರಪಿ ವಿಭಾಗದ ಡಾ.ಅಪ್ರಾ ಆಯ್ಕೆಯಾಗಿದ್ದರು ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಅಭಿನಂದನೆ ಮಾಡಲಾಯಿತು.
ವಿಶ್ವ ರಕ್ತದಾನಿಗಳ ದಿನದ ಭಾಗವಾಗಿ 153 ಬಾರಿ ರಕ್ತದಾನ ಮಾಡಿದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಟ್ರೀಟ್ ಗ್ರೋ ಇದರ ಇಂಜಿನಿಯರ್ ಕಲಂದರ್ ಎಲಿಮಲೆ ಸ್ವಾಗತಿಸಿ ಮುನವ್ವರ್ ಅಬೂಭಕ್ಕರ್ ರವರ ಪುತ್ರಿ ಹನಿನ್ ವಂದನಾರ್ಪಣೆ ಮಾಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.















ವೆಜ್ಸ್ ರೆಸ್ಟೋರೆಂಟ್ ಉದ್ಘಾಟನೆ ಪ್ರಯುಕ್ತ ವಿಶೇಷ ಆಕರ್ಷಣೆಯಾಗಿ ಗ್ರಾಹಕರಿಗೆ ಐ ಪೋನ್ ಗೆಲ್ಲುವ ಅವಕಾಶ
ವೆಜ್ಸ್ ರೆಸ್ಟೋರೆಂಟ್ ಉದ್ಘಾಟನೆ ಪ್ರಯುಕ್ತ ವೆಜ್ಸ್ ರೆಸ್ಟೋರೆಂಟ್ ಗ್ರಾಂಡ್ ಓಪೆನಿಂಗ್ ಕ್ಯಾಂಪೇನ್ ಭಾಗವಾಗಿ ಗ್ರಾಹಕರಿಗೆ ಐಫೋನ್,ಆಂಡ್ರಾಯ್ಡ್ ಪೋನ್ ಮತ್ತು ಹತ್ತು ಸಾವಿರ ನಗದು ಮತ್ತು ಇನ್ನಿತರ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು.
ಗ್ರಾಹಕರು ವೆಜ್ ರೆಸ್ಟೋರೆಂಟ್ ಗೇ ಭೇಟಿ ನೀಡಿ ಅಲ್ಲಿ ಸಿಗುವ ರಾಪೆಲ್ ಕೂಪನ್ ಪಡೆದುಕೊಳ್ಳಿ/ರೆಸ್ಟೋರೆಂಟ್ ಉದ್ಘಾಟನೆ ಸಮಾರಂಭದ ಪಾಂಪ್ಲೇಟಿನ ಅಡಿಬಾಗವನ್ನು ಕತ್ತರಿಸಿ ರೆಸ್ಟೋರೆಂಟ್ ನಲ್ಲಿ ಇರಿಸಿರುವ ರಾಪೆಲ್ ಬಾಕ್ಸ್ ಗೆ ಹಾಕಿ ಎಂಡ್ರಾಯ್ಡ್ ಪೊನ್ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ
ಅಲ್ಲದೇ ವೆಜ್ಸ್ ರೆಸ್ಟೋರೆಂಟ್ ಇನ್ ಸ್ಟಾಗ್ರಾಮ್ ಪೇಜ್‌ಫೊಲೊ ಮತ್ತು ಶೇರ್ ಮಾಡಿ ಐ ಪೋನ್ ಹಾಗೂ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ ಇದರ ಅವಕಾಶ ಅಗಸ್ಟ್ 31ರ ವರೆಗೆ ಚಾಲ್ತಿಯಲ್ಲಿರುತ್ತದೆ ನಮ್ಮ ವೆಜ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ ಬಹಳ ಮಿತದರದಲ್ಲಿ ಉತ್ತಮ ಕೊಡಬೇಕು ಅದರಿಂದ ಗ್ರಾಹಕರು ತೃಪ್ತಿ ಪಡಬೇಕು ಎಂದು ವೆಜ್ಸ್ ರೆಸ್ಟೋರೆಂಟ್ ಮಾಲಕ ದೀಪಕ್ ರಾಜ್ ತಿಳಿಸಿದರು.
ಈಗಿನ ಕಾಲದಲ್ಲಿ ಹೆಚ್ಚಿನ ಜನರು ಸಸ್ಯಹಾರವನ್ನೇ ಬಯಸುವವರು ಆದರಿಂದ ವೆಜ್ ರೆಸ್ಟೋರೆಂಟ್ ಗಳಿಗೆ ಹೆಚ್ಚಿನ ಅವಕಾಶವಿದೆ. ಹೊಸ ಉದ್ಯಮಗಳು ಹೆಚ್ಚು ಹೆಚ್ಚು ಬಂದರೆ ಸುಳ್ಯ ಬೆಳೆಯಲಿಕೆ ಉತ್ತಮ ಅವಕಾಶ ಸಿಗುತ್ತದೆ ಇನ್ನೂ ಹೆಚ್ಚಿನ ಒಳ್ಳೆಯ ಉದ್ಯಮಗಳು ಬರಲಿ ಅದರೊಂದಿಗೆ ಇವತ್ತು ಉದ್ಘಾಟನೆಗೊಂಡ ವೆಜ್ ರೆಸ್ಟೋರೆಂಟ್ ಉದ್ಯಮ ಯಶಸ್ವಿಯಾಗಲಿ : ಶಾಸಕಿ ಭಾಗೀರಥಿ ಮುರುಳ್ಯ ಸಿದರು.
ಸುಳ್ಯಕ್ಕೆ ಏನಾದರೂ ಹೊಸತನವನ್ನು ಕೊಡುವಂತ ಕನಸು ಮತ್ತು ಚಿಂತನೆಯಾಗಿತ್ತು .
ಅದಕ್ಕೆ ಪೂರಕವಾಗಿ ಒಂದು ಉತ್ತಮವಾದ ವೆಜ್ ರೆಸ್ಟೋರೆಂಟ್ ನ್ನು ಸುಳ್ಯಕ್ಕೆ ನೀಡಿದ್ದೇವೆ ಇದೇ ರೀತಿಯಲ್ಲಿ ಇನ್ನೂ ಯಾರಿಗಾದರೂ ಏನಾದರೂ ಹೊಸತನವನ್ನು ಕೊಡುವ ಚಿಂತನೆಗಳಿದ್ದರೆ,ನಿಮ್ಮಲ್ಲಿ ಏನಾದರೂ ಪರಿಕಲ್ಪನೆ ಇದ್ದರೇ ನಾವೂ ನಮ್ಮ ಸ್ಟೀಟ್ ಗ್ರೂ ಮೂಲಕ ಸಹಾಯ ಮಾಡುತ್ತೇವೆ ನಾವು ಒಟ್ಟಾಗಿ ಸೇರಿ ಸುಳ್ಯದ ಉದ್ಯಮವನ್ನು ಬೆಳೆಸೋಣ ಎಂದವರು ಹೇಳಿದರು : ಮುನ್ವರ್ ಅಬೂಭಕ್ಕರ್
ಸ್ಟ್ರೀಟ್ ಗ್ರೂ ಸಂಸ್ಥಾಪಕರು.
ಉದ್ಘಾಟನೆ ಸಮಾರಂಭದ ಪ್ರಯುಕ್ತ ಮಧ್ಯಾಹ್ನ ವರೆಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಲಾಯಿತು.
ಸಂಜೆ ಸುಳ್ಯ ಶಿವಪ್ರಸಾದ್ ಅಲೆಟ್ಟಿ ಯವರ ನೇತ್ರತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.










