ಬಡ,ಸಾಮಾನ್ಯ ಜನರಿಗೆ ಹೊರೆಯಾಗಿದೆ ಕಾನೂನು ಸಡಿಲಿಸುವಂತೆ ಸರ್ಕಾರಕ್ಕೆ ವೆಂಕಟ್ ವಳಲಂಬೆ ಒತ್ತಾಯ

0

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ವಿಚಾರವಾಗಿ ಜಿಲ್ಲಾಡಳಿತದ ಕಠಿಣ ಕಾನೂನು ಕ್ರಮದಿಂದ ಬಡ, ಸಾಮಾನ್ಯ ಜನರಿಗೆ ಹೊರೆಯಾಗಿದ್ದು ಅನೇಕ ಕಟ್ಟಡ,ಮನೆಯ ಕಾಮಗಾರಿಗಳು ಕುಂಠಿತವಾಗಿದೆ ಈ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಂಪು ಕಲ್ಲು ಮತ್ತು ಮರಳು ಇವುಗಳನ್ನು ನಂಬಿ ಅನೇಕ ಜನ ಬದುಕುತ್ತಿದ್ದಾರೆ,ದಿನಕ್ಕೊಂದು ಕಾನೂನು,ನಿಯಮಗಳು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೂಡ ಹೊಡೆತ ನೀಡಿದಂತಿದೆ,ಇಂತಹ ಪರಿಸ್ಥಿತಿಯಲ್ಲಿ ಮನೆ,ಕಟ್ಟಡ ನಿರ್ಮಾಣ ಹೇಗೆ ಸಾಧ್ಯ?ಬಡವರು ಮನೆ ನಿರ್ಮಿಸಲು ಸಾಧ್ಯವಿದೆಯೇ? ಸಾಮಾನ್ಯ ಜನರ,ಕಾರ್ಮಿಕರ ಹಿತದೃಷ್ಟಿಯಿಂದ ಮರಳು,ಕೆಂಪು ಕಲ್ಲು ಪರವಾನಿಗೆ ಸಡಿಲಗೊಳಿಸಿ ಅನುಕೂಲ ಮಾಡಿಕೊಡುವಂತೆ ವೆಂಕಟ್ ವಳಲಂಬೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.