ಮರ್ಕಂಜ: ಮಿತ್ತಡ್ಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ, ಪೋಷಕರ ಸಭೆ ಮತ್ತು ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಮರ್ಕಂಜದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪ್ರಥಮ ಎಸ್.ಡಿ.ಎಂ.ಸಿ, ಪೋಷಕರ ಸಭೆ ಮತ್ತು ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ. 14ರಂದು ನಡೆಯಿತು.

ಶಾಲೆಯ ಮುಖ್ಯ ಶಿಕ್ಷಕಿ ಕುಮಾರಿ ಪಲ್ಲವಿ ಎಸ್.ರವರು 2025 – 26ನೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಪ್ರಗತಿಯ ಹಾಗೂ ಶಾಲಾ ಅಭಿವೃದ್ಧಿ ಕುರಿತು ಹಮ್ಮಿಕೊಳ್ಳಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯ ಎಲ್ಲಾ ಮಕ್ಕಳಿಗೂ ಊರಿನ ದಾನಿಗಳಾದ ರಾಮಕೃಷ್ಣ ರಾವ್, ಶಂಕರಗಿರಿ ನಾರಾಯಣ ಭಟ್, ಶ್ರೀಮತಿ ತೀರ್ಥಕುಮಾರಿ ನೂಜಾಲ, ದಾಮೋದರ ಪಾಟಾಳಿ ಮಿತ್ತಡ್ಕ, ಧನಂಜಯ ಪಿಂಡಿಮನೆ, ದಿನೇಶ ಕುದ್ಕುಳಿ, ಜಯರಾಮ ದೇಶಕೋಡಿ ಇವರುಗಳು ಕೊಡುಗೆಯಾಗಿ ನೀಡಿದ ನೋಟು ಪುಸ್ತಕಗಳನ್ನು ವಿತರಿಸಲಾಯಿತು.

ಶಾಲೆಯ ಅಭಿವೃದ್ಧಿಗೆ ಎಸ್.ಡಿ.ಎಂ.ಸಿ.ಯ ಎಲ್ಲಾ ಸದಸ್ಯರು, ಪೋಷಕರು ಹಾಗೂ ಶಿಕ್ಷಕ ವರ್ಗದವರು ಸಹಕರಿಸಬೇಕೆಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ನೂತನ ಎಸ್.ಡಿ.ಎಂ.ಸಿ ಸದಸ್ಯರ ಆಯ್ಕೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಧನಂಜಯ ಪಿಂಡಿಮನೆ ವಹಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ ಅಡ್ಕಬಳೆ, ಜಯರಾಮ ದೇಶಕೋಡಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ರಮ್ಯ ಮಿತ್ತಡ್ಕ, ಮುಖ್ಯೋಪಾಧ್ಯಾಯಿನಿ ಕುಮಾರಿ ಪಲ್ಲವಿ . ಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ವೀಣಾ ಬಿ.ಪಿ. ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಪಲ್ಲವಿ ಎಸ್. ಸ್ವಾಗತಿಸಿ, ಶ್ರೀಮತಿ ಪ್ರತಿಮಾ ಕುಮಾರಿ ಕೆ.ಎಸ್. ವಂದಿಸಿದರು.