ಕುರುಂಜಿಭಾಗ್ ಬಳಿ ಮರದ ಕೊಂಬೆ ಬಿದ್ದುತಾಲೂಕು ಕಚೇರಿಯ ಮೇಲ್ಚಾವಣಿಗೆ ಮತ್ತು ರಿಕ್ಷಾ ನಿಲ್ದಾಣಕ್ಕೆ ಹಾನಿ

0

ಕೆ.ವಿ.ಜಿ ಕ್ಯಾಂಪಸ್ ಬಳಿ‌ಯ ಕುರುಂಜಿಭಾಗ್ ರಿಕ್ಷಾ ನಿಲ್ದಾಣದ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ತಾಲೂಕು ಕಚೇರಿಯ ಮೇಲ್ಚಾವಣಿಯ ಹಂಚುಗಳು‌ ಪುಡಿಯಾಗಿದೆ. ರಿಕ್ಷಾ ನಿಲ್ದಾಣಕ್ಕೆ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಅಟೋ ನಿಲ್ದಾಣದಲ್ಲಿ ರಿಕ್ಷಾ ನಿಲ್ಲಿಸಲಾಗಿದ್ದು ಘಟನೆಯಿಂದ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.