ಎಸ್.ಎಸ್.ಎಲ್.ಸಿ. ಮರುಪರೀಕ್ಷೆ ಬರೆದ ಬೆಳ್ಳಾರೆ ಕೆಪಿಎಸ್ ಹತ್ತನೇ ತರಗತಿ ವಿದ್ಯಾರ್ಥಿನಿ ಕು. ಶರಧಿ ನೆಟ್ಟಾರುರವರು ರಾಜ್ಯಮಟ್ಟದಲ್ಲಿ 4ನೇ ರ್‍ಯಾಂಕ್ ಹಾಗೂ ಬೆಳ್ಳಾರೆ ಕೆಪಿಎಸ್ ಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ.















ಪ್ರಥಮ ಪರೀಕ್ಷೆಯಲ್ಲಿ 614 ಅಂಕಗಳನ್ನು ಪಡೆದ ಇವರು ಮರುಪರೀಕ್ಷೆಗೆ ಹಾಜರಾಗಿ 622 ಅಂಕಗಳನ್ನು ಪಡೆದುಕೊಂಡು ಈ ಸಾಧನೆಯನ್ನು ಮಾಡಿದ್ದಾರೆ. ಇವರು ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿರುವ ಪದ್ಮನಾಭ ನೆಟ್ಟಾರು ಮತ್ತು ಶ್ರೀಮತಿ ವಿಶಾಲಾಕ್ಷಿ ದಂಪತಿಯ ಪುತ್ರಿ. ಪ್ರಸ್ತುತ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಓದುತ್ತಿದ್ದಾರೆ.



