ಮುರೂರು; ರಸ್ತೆಗೆ ಮರ ಬಿದ್ದು ತಿಂಗಳಾದರೂ ಕ್ಲಿಯರ್ ಆಗದೆ ಅಪಾಯಕ್ಕೆ ಆಹ್ವಾನ

0

ಸುಳ್ಯ- ಕಾಸರಗೋಡು ಮುಖ್ಯ ರಸ್ತೆಯ ಮುರೂರು ಸಮೀಪದ ಚೀಮುಳ್ಳು ತಿರುವಿನಲ್ಲಿ ಮರ ಬಿದ್ದು ತಿಂಗಳು ಕಳೆದರೂ ರಸ್ತೆ ಕ್ಲಿಯರ್ ಮಾಡಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಗಾಳಿ ಮಳೆಗೆ ಮುಖ್ಯ ರಸ್ತೆಗೆ ಮರ ಬಿದ್ದಿದ್ದು, ಮರವನ್ನು ಸಂಪೂರ್ಣ ತೆರವುಗೊಳಿಸದೇ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ. ತಿರುವು ಮತ್ತು ಎತ್ತರ ರಸ್ತೆಯಾದುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ.ಆದುದರಿಂದ ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.