ಉದಯೋನ್ಮುಖ ಧ್ವನಿಮಾಯೆ ಕಲಾವಿದೆ ಕುಕ್ಕುಜಡ್ಕದ ಸಾಯಿಶ್ರುತಿ ಪಿಲಿಕಜೆಯವರು ಝೀ ಕನ್ನಡ ಚಾನೆಲ್‌ನ ಮಹಾನಟಿ ರಿಯಾಲಿಟಿ ಶೋ ಸೀಝನ್ ೨ನ ದ ಗೋಲ್ಡನ್ ಟಿಕೆಟ್ ಪಡೆದು ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ.















ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೭.೩೦ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ.
ಅಮರಮುಡ್ನೂರು ಗ್ರಾಮದ ಶಿವಸಾಯಿ ಭಟ್ ಮತ್ತು ದಿ.ಸುಜ್ಯೋತಿ ದಂಪತಿಯ ಪುತ್ರಿಯಾಗಿರುವ ಸಾಯಿಶ್ರುತಿ ಬಹುಮುಖ ಪ್ರತಿಭೆಯಾಗಿದ್ದು, ಬೆಂಗಳೂರಿನಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದಾರೆ.










