ಆಸ್ಟ್ರೇಲಿಯಾದ ಲ್ಯಾಟ್ರೋಬ್ ಸಿಟಿ ಕೌನ್ಸಿಲ್ ನಲ್ಲಿ ಆರೋಗ್ಯಾಧೀಕ್ಷಕರಾಗಿ ಡಾ.ಅನಿರುದ್ದ ಬಿ.ಎಸ್ ಮಜಿಗುಂಡಿ ನೇಮಕ

0

ಆಲೆಟ್ಟಿ ಗ್ರಾಮದ ಅರಂಬೂರಿನ ಮಜಿಗುಂಡಿ ನಿವಾಸಿ ಡಾ.ಅನಿರುದ್ದ ಬಿ.ಎಸ್ ರವರು ಆಸ್ಟ್ರೇಲಿಯಾದ ಲ್ಯಾಟ್ರೋಬ್ ಸಿಟಿ ಕೌನ್ಸಿಲ್ ಇದರ ಎನ್ವಾರ್ನಮೆಂಟಲ್ ಹೆಲ್ತ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.

ಇವರು ಬೆಂಗಳೂರಿನ ಸರಕಾರಿ ಡೆಂಟಲ್ ಕಾಲೇಜಿನಲ್ಲಿ ಬಿ.ಡಿ.ಎಸ್.ಪೂರೈಸಿ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.ಅಲ್ಲಿ 2 ವರ್ಷಗಳಿಂದ ಡೆಕ್ಕನ್ ಯುನಿವರ್ಸಿಟಿ ಮೆಲ್ಬೊರ್ನ್ ನಲ್ಲಿ ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್ ಪೋಸ್ಟ್ ಡಿಗ್ರಿಯಾಗಿ ಆರೋಗ್ಯಾಧೀಕ್ಷಕರಾಗಿ ಉದ್ಯೋಗಕ್ಕೆ ನೇಮಕಗೊಂಡಿರುತ್ತಾರೆ.

ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಡೆದು ಕೆ.ವಿ.ಜಿ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಮಂಗಳೂರಿನ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ. ಇವರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶ್ರೀಪತಿ ಭಟ್ ಮಜಿಗುಂಡಿ ಮತ್ತು ಶ್ರೀಮತಿ ಸತ್ಯಭಾಮಾ ದಂಪತಿಯ ಪುತ್ರ.