ಯೋಗ ವಿಜ್ಞಾನದ ಹರಿಕಾರ ಭಾರತದ ಪ್ರಥಮ ಯೋಗ ಪ್ರೊಫೆಸರ್ ದಿ| ಡಾ| ಕೆ. ಕೃಷ್ಣ ಭಟ್ ಇವರ ಸ್ಮರಣಾರ್ಥ ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್(ರಿ) ಮಂಗಳೂರು ತಪಸ್ವಿ ಸ್ಕೂಲ್ ಆಫ್ ಯೋಗ ಮಂಗಳೂರು ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮಂಗಳೂರು ಇದರ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯು ಜೂನ್ 15 ರಂದು ಮಂಗಳೂರಿನಲ್ಲಿ ನಡೆಯಿತು.















ಒಂಬತ್ತರ ವಯೋಮಿತಿಯ ಒಳಗಿನ ಬಾಲಕರ ವಿಭಾಗದಲ್ಲಿ ಆಶ್ರಿತ್ ಎ. ಸಿ ಪ್ರಥಮ ಸ್ಥಾನ ಇವರು ಚೇತನ್ ಅಮೆಮನೆ ಹಾಗೂ ದಿವ್ಯಾರವರ ಪುತ್ರ, ಹದಿನಾಲ್ಕರ ವಯೋಮಿತಿಯ ಬಾಲಕರ ವಿಭಾಗದಲ್ಲಿ ತನುಷ್ ಎಂ.ಹೆಚ್ ಪ್ರಥಮ ಸ್ಥಾನ ಇವರು ಹರೀಶ್ ಮೋಂಟಡ್ಕ ಮತ್ತು ಭವಾನಿರವರ ಪುತ್ರ, ಹದಿನಾಲ್ಕರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಹಾರ್ದಿಕ ಕೆರೆಕ್ಕೋಡಿ ಪ್ರಥಮ ಸ್ಥಾನ ಇವರು ಕೃಷ್ಣಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ, ಯು.ಅದಿತಿ ಚತುರ್ಥ ಸ್ಥಾನ ಇವರು ಸತ್ಯೇಶ್ ಕುಮಾರ್ ಯು ಹಾಗೂ ಸುಮಾ ದಂಪತಿಗಳ ಪುತ್ರಿ, ಹದಿನೆಂಟರ ವಯೋಮಾನದ ಬಾಲಕರ ವಿಭಾಗದಲ್ಲಿ ತನುಷ್ ಕೆ ಆರ್ ದ್ವಿತೀಯ ಇವರು ರವಿ. ನಾವೂರು ಹಾಗೂ ಪ್ರಜ್ಞಾ ದಂಪತಿಗಳ ಪುತ್ರ.
ಚಾಂಪಿಯನ್ ಆಫ್ ಚಾಂಪಿಯನ್ ಅಂತಿಮ ಸುತ್ತಿಗೆ ಆಶ್ರಿತ್ ಎ.ಸಿ,ಹಾರ್ದಿಕ ಕೆರೆಕ್ಕೋಡಿ, ತನುಷ್ ಎಂ ಹೆಚ್, ತನುಷ್ ಕೆ.ಆರ್ ಇವರು ಆಯ್ಕೆಯಾಗಿದ್ದರು. ರನ್ನರ್ ಆಫ್ ಪ್ರಶಸ್ತಿಯನ್ನು ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ತನ್ನದಾಗಿಸಿಕೊಂಡಿತು.ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜಾ ಸಂತೋಷ್ ಇವರು ಮಾರ್ಗದರ್ಶನ ನೀಡಿರುತ್ತಾರೆ.










