ಹೆದ್ದಾರಿಯಲ್ಲಿ ನಿರ್ಮಾಣವಾದ ಮೃತ್ಯು ಕೂಪದ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ

0

ಸುದ್ದಿ ವೆಬ್‌ ಸೈಟ್ ವರದಿಗೆ ತಾಸಿನೊಳಗೆ ಸ್ಪಂದನೆ

ರಾಜ್ಯ ಹೆದ್ದಾರಿ ಸುಳ್ಯ ನಗರದಲ್ಲಿ ಅಲ್ಲಲ್ಲಿ ನೀರಿನ ಪೈಪು ಲೈನ್ ಹಾಕಲು ಗುಂಡಿ ತೋಡಲಾಗಿದ್ದು ಪೈಪು ಲೈನ್ ಅಳವಡಿಸಿದ ನಂತರ ಅದನ್ನು ಸಮರ್ಪಕವಾಗಿ
ಮುಚ್ಚಿ ಕಾಂಕ್ರೀಟ್ ಮಾಡದಿರುವುದರಿಂದ ಮಳೆ ಬಂದು ಹೊಂಡದಲ್ಲಿ ನೀರು ನಿಂತು ವಾಹನ ಸವಾರರಿಗೆ ಸಂಕಷ್ಟವಾಗಿತ್ತು.


ಈ ಕುರಿತು ಸ್ಥಳೀಯರಾದ ರಂಜಿತ್ ಪೂಜಾರಿ ಸಮಸ್ಯೆಯ ಕುರಿತು ಸುದ್ದಿಗೆ ವಿಷಯ ತಿಳಿಸಿದ್ದರು. ಈ ಕುರಿತು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಲಾಗಿತ್ತು.

ವರದಿ ಬಿತ್ತರಗೊಂಡ ಒಂದು ತಾಸಿನೊಳಗಾಗಿ ನಗರ ಪಂಚಾಯತ್ ಹಾಗೂ ತಾಲೂಕು ಆಡಳಿತ ಸ್ಪಂದಿಸಿ ನಗರದ ಹಲವೆಡೆ ಗಾಂಧಿನಗರ, ಅಂಬಟೆಡ್ಕ ಚೆನ್ನಕೇಶವ ವೃತ್ತದಬಳಿ,ರಥಬೀದಿಯಲ್ಲಿ,ಜನತಾ ಸ್ಟೋರ್ ಮುಂಭಾಗ ಮುಂತಾದ ಕಡೆಗಳಲ್ಲಿನಿರ್ಮಾಣವಾಗಿದ್ದ ಹೊಂಡಗಳಿಗೆ ಸಿಮೆಂಟ್ ಮಿಶ್ರಿತ ಜಲ್ಲಿ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡುವ ಮೂಲಕ ಸ್ಪಂದಿಸಿರುತ್ತಾರೆ.
ಇದರಿಂದಾಗಿ ವಾಹನ ಸವಾರರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.