ಮಹಿಳೆಯೊಂದಿಗೆ ಅನುಚಿತ ವರ್ತನೆಯ ಆರೋಪ

0

ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಮೇಲೆ ಕೇಸು ದಾಖಲು

ಮಹಿಳೆಯೊಬ್ಬರನ್ನು ತನ್ನ ಮನೆಗೆ ಕರೆದೊಯ್ದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆಂದು ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲುರವರ ಮೇಲೆ ಮಹಿಳೆಯೊಬ್ಬರು ನೀಡಿರುವ ದೂರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಸ್ವಸಹಾಯ ಸಂಘದ ಮಹಿಳೆಯೊಬ್ಬರನ್ನು ಗ್ರಾಮ ಪಂಚಾಯತ್ ಬಳಿಯಿಂದ ಕಾರಲ್ಲಿ ತನ್ನ ಮನೆಗೆ ಕರೆದೊಯ್ದ ಶೈಲೇಶ್ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆಂದೂ, ಇದನ್ನು ವಿರೋಧಿಸಿದ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಪತಿಗೆ ಹೇಳಿ ಬಳಿಕ ಪೋಲೀಸರಿಗೆ ದೂರು ನೀಡಿದರೆಂದೂ ಹೇಳಲಾಗುತ್ತಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.