ಆಸ್ಪತ್ರೆಯ ಕೆಲಸ ಕಾರ್ಯಗಳ ಪರೀಶೀಲನೆ ನಡೆಸಿದ ಆರೋಗ್ಯ ಸಚಿವರು
೧೦೮ ಅಂಬ್ಯುಲೆನ್ಸ್ ಸಿಬ್ಬಂದಿಗಳು, ಡಿ ದರ್ಜೆ ನೌಕರರಿಂದ ಮನವಿ ಸಲ್ಲಿಕೆ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ೫೫ ಲಕ್ಷ ರೂ ವೆಚ್ಚದಲ್ಲಿ ಮಾಡಲಾಗಿರುವ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್, ೩೨ ಲಕ್ಷದಲ್ಲಿ ನಿರ್ಮಾಣಗೊಂಡಿರುವ ಐಸೋಲೇಷನ್ ವಾರ್ಡ್ ಹಾಗೂ ನೂತನ ಶವಗಾರ, ಆಸ್ಪತ್ರೆಯ ಎದುರು ನವೀಕರಣ, ಡಯಾಲಿಸಿಸ್ ಕೇಂದ್ರದ ನವೀಕರಣಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಸೇರಿ ೨ ಕೋಟಿ ೭೯ ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್‌ರವರು ಜೂ.೧೮ರಂದು ಉದ್ಘಾಟಿಸಿದರು.
















ಉದ್ಘಾಟನೆಗಳನ್ನು ನೆರವೇರಿಸಿದ ಸಚಿವರು ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಹೆಚ್.ಆರ್. ತಿಮ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ| ತ್ರಿಮೂರ್ತಿ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಕರುಣಾಕರ್ ಕೆ.ವಿ. ಯವರ ಜತೆ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಸಚಿವರು ಆಸ್ಪತ್ರೆಯ ಕೆಲಸ ಕಾರ್ಯಗಳ ಪರೀಶೀಲನೆ ನಡೆಸಿದರು. ಐಸಿಯು, ಡಯಾಲಿಸಿಸ್ ಕೇಂದ್ರ ಐಸೋಲೇಷನ್ ವಾರ್ಡ್, ಲ್ಯಾಬ್‌ಗಳು ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು.

ಸಚಿವರಿಗೆ ಮನವಿ : ಆಸ್ಪತ್ರೆಯ ೧೦೮ ಸಿಬ್ಬಂದಿಗಳು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿ ಮೂರು ತಿಂಗಳಿನಿಂದ ಸಂಬಳ ಆಗದಿರುವ ಕುರಿತು ದೂರಿಕೊಂಡರು. ಈ ವೇಳೆ ಮಾತನಾಡಿದ ಸಚಿವರು, ನೀವು ನಮ್ಮ ಎಂಪ್ಲಾಯಿಸ್ ಅಲ್ಲ. ನಾವು ಏಜೆನ್ಸಿಯವರಿಗೆ ಹಣ ಬಿಡುಗಡೆ ಮಾಡಿzವೆ, ಅವರು ಕೊಡಬೇಕು'' ಎಂದರು. ಆಗ ಶಾಸಕಿ ಭಾಗೀರಥಿಯವರು,ಏಜೆನ್ಸಿಯವರಿಗೆ ಹಣ ಬಿಡುಗಡೆ ಮಾಡಲು ನಾವೇ ಸೂಚನೆ ನಿಡಬೇಕು. ಇಲ್ಲದಿದ್ದರೆ ಅವರು ಹಣ ಬಿಡುಗಡೆ ಮಾಡಬೇಕಲ್ಲವೇ” ಎಂದು ಹೇಳಿದಾಹ, ಅದನ್ನು ಹೇಳೋಣ. ಏಜೆನ್ಸಿಗೆ ನೀಡದೇ ಸರಕಾರವೇ ೧೦೮ ನ್ನು ನಡೆಸಲು ನಿರ್ಧರಿಸಲಾಗಿದೆ. ಇನ್ನೊಂದು ಮೂರು ತಿಂಗಳಲ್ಲಿ ಇದು ಆಗುತ್ತದೆ'' ಎಂದರು.ಈಗ ಇರುವ ಸಿಬ್ಬಂದಿಗಳಿಗೆ ಆದ್ಯತೆ ನೀಡಬೇಕೆಂದು ಸಿಬ್ಬಂದಿಗಳು ಕೇಳಿದಾಗ, ಅನುಭವಿಗಳಿಗೆ ಆದ್ಯತೆ ನೀಡುತ್ತೇವೆ” ಎಂದು ಸಚಿವರು ಹೇಳಿದರು.

ಅವರ ಮನವಿಯ ಬಳಿಕ ಆಸ್ಪತ್ರೆ ಡಿ.ದರ್ಜೆ ನೌಕರರು ಸಚಿವರಿಗೆ ಮನವಿ ಸಲ್ಲಿಸಿದರು. “ಈಗಾಗಲೇ ಹಣ ಬಿಡುಗಡೆ ಆಗಿದೆ” ಎಂದು ಸಚಿವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ನ.ಪಂ.ಅಧ್ಯಕ್ಷೆ ಶಶಿಕಲಾ ಎ., ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ತಹಶೀಲ್ದಾರ್ ಮಂಜುಳಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಮುಖಂಡರಾದ ಧನಂಜಯ ಅಡ್ಡಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್, ಜಿ.ಕೃಷ್ಣಪ್ಪ, ಪಿ.ಸಿ.ಜಯರಾಮ, ರಾಧಾಕೃಷ್ಣ ಬೊಳ್ಳೂರು, ನಿತ್ಯಾನಂದ ಮುಂಡೋಡಿ, ಪಿ.ಎಸ್.ಗಂಗಾಧರ, ಗೀತಾ ಕೋಲ್ಟಾರ್, ಶ್ರೀಮತಿ ಲೀಲಾ ಮನಮೋಹನ್ , ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಸರಸ್ವತಿ ಕಾಮತ್, ಬೆಟ್ಟ ಜಯರಾಮ ಭಟ್, ಇಟ್ಬಾಲ್ ಎಲಿಮಲೆ, ಸೋಮಶೇಖರ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ, ಶಹೀದ್ ಪಾರೆ, ಜಿ.ಕೆ.ಹಮೀದ್, ಕೆ.ಗೋಕುಲ್‌ದಾಸ್, ಮಹಮ್ಮದ್ ಕುಂಞ ಗೂನಡ್ಕ, ಧರ್ಮಪಾಲ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ,ರಹೀಂ ಬೀಜದಕಟ್ಟೆ, ರಾಜು ಪಂಡಿತ್, ಭವಾನಿ ಶಂಕರ್ ಕಲ್ಮಡ್ಕ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ರಂಜಿತ್ ರೈ ಮೇನಾಲ, ಎಸ್.ಕೆ.ಹನೀಫ, ದಿನೇಶ್ ಅಂಬೆಕಲ್ಲು, ಫವಾರh ಕನಕಮಜಲು ಮತ್ತಿತರರು ಉಪಸ್ಥಿತರಿದ್ದರು.










