ಕೋಲ್ಚಾರು : ಶಾಲಾ ಮಂತ್ರಿಮಂಡಲ ರಚನೆ

0

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರಿನಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮಾಡಲಾಯಿತು.

ಆಧುನಿಕ ತಂತ್ರಜ್ಞಾನ ವಿದ್ಯುನ್ಮಾನ ಮತಯಂತ್ರ ಆಪ್ ಅನ್ನು ಬಳಸುವ ಮೂಲಕ ಶಾಲಾ ಮಂತ್ರಿಮಂಡಲ ರಚಿಸಲಾಯಿತು.

ಚುನಾವಣಾ ಅಧಿಕಾರಿಯಾಗಿ ಮುಖ್ಯ ಗುರು ಚಿನ್ನಸ್ವಾಮಿ ಶೆಟ್ಟಿ, ಪಿ ಆರ್ ಓ ಆಗಿ ಜಲಜಾಕ್ಷಿ ಸಹ ಶಿಕ್ಷಕಿ, ಎ ಪಿ ಆರ್ ಓ ಆಗಿ ಮಮತಾ ಕೆ ವಿ ಪೋಲಿಂಗ್ ಅಧಿಕಾರಿಗಳಾಗಿ ಮನು ಕುಮಾರ್ ಸಿ ಎಂ ಮತ್ತು ವಿನುತ ಕೋಲ್ಚಾರು ಕರ್ತವ್ಯ ನಿರ್ವಹಿಸಿದರು.

114 ವಿದ್ಯಾರ್ಥಿಗಳು ಮತ ಚಲಾವಣೆ ಮಾಡಿದರು. ಅತ್ಯಧಿಕ ಮತಗಳಿಂದ ಶಾಲಾ ನಾಯಕನಾಗಿ ಅನ್ವಿತ್ ಹೆಚ್ ಕೆ ಇವನನ್ನು ಆರಿಸಲಾಯಿತು. ಉಪನಾಯಕಿಯಾಗಿ ಶೃತಿ ಎಂ ಎಸ್ ಆರಿಸಲಾಯಿತು. ಇದೇ ಸಂದರ್ಭದಲ್ಲಿ ಮಂತ್ರಿಮಂಡಲ ರಚಿಸಿ, ಮಂತ್ರಿಮಂಡಲದ ಜವಾಬ್ದಾರಿ, ಹಾಗೂ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಲಾಯಿತು. ಕೊನೆಯಲ್ಲಿ ಎಲ್ಲ ಮಂತ್ರಿಗಳಿಗೆ ಪ್ರಮಾಣ ವಚನವನ್ನು ಮುಖ್ಯ ಗುರುಗಳು ಬೋಧಿಸಿದರು.