ಸುಳ್ಯದ ಕಲ್ಕುಡ ದೈವಸ್ಥಾನದ ವಾರ್ಷಿಕ ಪ್ರತಿಷ್ಠಾ ತಂಬಿಲ ಸೇವೆ

0

ಸುಳ್ಯದ ಕಲ್ಕುಡ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕ ತಂಬಿಲ ಸೇವೆಯು ಜೂ.20 ರಂದು ಮಧ್ಯಾಹ್ನ ನಡೆಯಿತು.


ಚೆನ್ನಕೇಶವ ದೇವಸ್ಥಾನದ ಅರ್ಚಕ ಹರಿಕೃಷ್ಣ ವಾರಂಬಳಿತ್ತಾಯ ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.

ದೈವಸ್ಥಾನದ ಆಡಳಿತ ಧರ್ಮದರ್ಶಿ ಉಮೇಶ್ ಪಿ.ಕೆ, ಮಂಡಳಿಯ ಸದಸ್ಯರಾದ ಕೆ. ಸೋಮನಾಥ ಪೂಜಾರಿ, ಪ್ರಕಾಶ್ ಹೆಗ್ಡೆ, ಕೇಶವ ನಾಯಕ್, ಭಾಸ್ಕರ ಐಡಿಯಲ್, ಚಂದ್ರಶೇಖರ ಸೆಂಚುರಿ, ಹರೀಶ್ ಬೂಡುಪನ್ನೆ, ಸತ್ಯಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೈವಸ್ಥಾನದ ಪೂಜಾರಿಗಳಾದ ಮೋನಪ್ಪ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು, ಜಗದೀಶ್ ಹಾಗೂ ಸ್ಥಳೀಯ ಭಕ್ತಾದಿಗಳು ಸಹಕರಿಸಿದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.