ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ನಾಡಿನ ಖ್ಯಾತ ಹಿರಿಯ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಸುಳ್ಯ ಅವರಿಗೆ 85 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಅವರಿಗೆ ಅವರ ಚೊಕ್ಕಾಡಿ ಗೃಹದಲ್ಲಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರಿ ಸಮ್ಮಾನಿಸಿ ಗೌರವಿಸಿದ್ದಾರೆ.








ಸನ್ಮಾನ ಕಾರ್ಯಕ್ರಮವನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಗಾಯಕ ಮತ್ತು ಜ್ಯೋತಿಷ್ಯರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ, ಕಲಾವಿದ ನಾಗರಾಜ್ ಖಾರ್ವಿ, ಗಾಯಕರಾದ ಪೆರುಮಾಳ್ ಲಕ್ಷ್ಮಣ್, ರಾಜೇಶ್ ಸುಳ್ಯ ಮತ್ತು ಕವಯಿತ್ರಿ ಸುಮಂಗಲ ಲಕ್ಷ್ಮಣ್ ಕೊಳಿವಾಡ ಇನ್ನಿತರರು ಉಪಸ್ಥಿತರಿದ್ದು ನೆರವೇರಿಸಿದರು.










