ಪುತ್ತೂರು- ಪೆರ್ಲಂಪಾಡಿ- ಪೈಲಾರು ಬಸ್ಸು ಇದೀಗ ಎಲಿಮಲೆಯವರೆಗೆ ವಿಸ್ತರಣೆಯಾಗಿದೆ. ಜು. 2ರಂದು ಬಂದ ಬಸ್ಸನ್ನು ಬಾಲಸುಬ್ರಹ್ಮಣ್ಯ ಮೋಂಟಡ್ಕ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿ, ಶುಭಹಾರೈಸಿದರು.
ಪೈಲಾರಿನಿಂದ ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಧರ್ಮಸ್ಥಳ ಡಿಪೋದ ಬಸ್ಸು ಈವರೆಗೆ ಪೈಲಾರಿನಲ್ಲಿ ರಾತ್ರಿ ತಂಗುತ್ತಿತ್ತು. ಪೈಲಾರು-ಎಲಿಮಲೆ ಮಧ್ಯೆ ಸೀಮಿತ ಸಾರಿಗೆ ವ್ಯವಸ್ಥೆ ಇರುವುದನ್ನು ಮನಗಂಡಂತಹ ಚೈತನ್ಯ ದೀಕ್ಷಿತ್ ಕೆಳಪಾರೆ ಮತ್ತು ಜಯರಾಮ್ ಭಟ್ ಇವರುಗಳು ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಬಸ್ ಎಲಿಮಲೆವರೆಗೆ ಸಂಚಾರದ ವಿಸ್ತರಣೆಯನ್ನು ಮಾಡಿಸಿರುತ್ತಾರೆ.















ಈ ವೇಳೆ ಜಯರಾಮ್ ಶೆಟ್ಟಿ ಮರ್ಗಿಲಡ್ಕ ಬಾಲಕೃಷ್ಣ ಕಡಪಳ, ರಾಜಗೋಪಾಲ್ ಭಟ್ ಅಂಬೆಕಲ್ಲು, ಗಣೇಶ್ ಭಟ್ ಹೊನ್ನಡಿ, ಸಚ್ಚಿದಾನಂದ ಭಟ್ ಹಾಗೂ ಮತ್ತಿತರು ಹಾಜರಿದ್ದರು. ಇನ್ನು ಇದೇ ವೇಳೆ ಬಸ್ಸನ್ನು ತರಲು ಶ್ರಮಿಸಿದವರಿಗೆ ಮತ್ತು ಸಾರಿಗೆ ಇಲಾಖೆಯವರಿಗೆ ಊರಿನವರು ಧನ್ಯವಾದ ತಿಳಿಸಿದರು.
ಈ ಬಸ್ ಬೆಳಗ್ಗೆ 6.45ಕ್ಕೆ ಎಲಿಮಲೆಯಿಂದ ಹೊರಟು 8 ಗಂಟೆಗೆ ಪುತ್ತೂರಿಗೆ ತಲುಪಲಿದ್ದು , ಸಂಜೆ 5 ಗಂಟೆಗೆ ಪುತ್ತೂರಿನಿಂದ ಹೊರಟು 6.45ಕ್ಕೆ ಎಲಿಮಲೆಗೆ ಬಂದು ತಂಗಲಿದೆ.










