ನಗರ ಪಂಚಾಯತ್ ಗೇಟಿಗೆ ಬೀಗ ಜಡಿಯುವ ಎಚ್ಚರಿಕೆಯ ಬೆನ್ನಲ್ಲೇ ರಸ್ತೆಯ ಹೊಂಡ ಗುಂಡಿಗಳಿಗೆ ಜಲ್ಲಿ ತುಂಬುವ ಕೆಲಸಕ್ಕೆ ಚಾಲನೆ

0

ಅಮೃತ್ ೨ ಯೋಜನೆಗೆ ತೋಡಿದ ನಗರದ ರಸ್ತೆಯಲ್ಲಿನ ಹೊಂಡವನ್ನು ಪೂರ್ಣವಾಗಿ ಸರಿಪಡಿಸದಿದ್ದಲ್ಲಿ ಜು.೧೬ ರಂದು ಪಂಚಾಯತ್ ಗೇಟಿಗೆ ಬೀಗ ಜಡಿಯುವ ಬಗ್ಗೆ ನ.ಪಂ. ಸದಸ್ಯ ಕೆ.ಎಸ್. ಉಮ್ಮರ್‌ರವರು ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಇದೀಗ ನಗರದ ವಿವಿಧ ಭಾಗಗಳಲ್ಲಿ ರಸ್ತೆಯಲ್ಲಿವ ಹೊಂಡ ಗುಂಡಿಗಳಿಗೆ ತಾತ್ಕಾಲಿಕ ಜಲ್ಲಿ ತುಂಬುವ ಕಾರ್ಯವನ್ನು ಸಂಬಂಧಪಟ್ಟ ಗುತ್ತಿಗೆದಾರರು ಆರಂಭಿಸಿದ್ದಾರೆ.

ಜಯನಗರ, ಬೀರಮಂಗಲ, ಕಲ್ಲುಮುಟ್ಲು ಮುಂತಾದ ಕಡೆಗಳಲ್ಲಿ ಹೊಂಡಗಳಿಗೆ ಜಲ್ಲಿ ತುಂಬುವ ಕೆಲಸ ನಡೆಯುತ್ತಿರುವುದು ಕಂಡುಬರುತ್ತಿದ್ದು,
ಆದರೆ ರಸ್ತೆ ಹೊಂಡಕ್ಕೆ ಬರೀ ಜಲ್ಲಿಗಳನ್ನು ಮಾತ್ರ ಇಟ್ಟು ಹೋದರೆ ಇದರ ಮೇಲೆ ವಾಹನಗಳು ಸಂಚರಿಸುವಾಗ ಮತ್ತೆ ಅದು ಎದ್ದು ಹೋಗುವ ಸಾಧ್ಯತೆಯೂ ಇದ್ದು ಈ ಬಗ್ಗೆಯೂ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.