ಪೊಲೀಸ್ ಇಲಾಖೆಯ ಉದ್ಯೋಗಿ ಸಂದ್ಯಾಮಣಿ ಅವರ ಪುತ್ರ ರಾಷ್ಟ್ರೀಯ ಕಬಡ್ಡಿ ಪಟು ಆಶಿಶ್ ಕೋಟೆಬಾಗಿಲು ಅವರಿಗೆ ಪುತ್ತೂರು ಸಂಪ್ಯ ಠಾಣೆಯಲ್ಲಿ ಜು.6 ರಂದು ಸನ್ಮಾನಿಸಲಾಯಿತು.















ಆಶಿಶ್ ಅವರು 18 ವರ್ಷ ವಯೋಮಾನದ ರಾಷ್ಟ್ರೀಯ ಕಬಡ್ಡಿಯಲ್ಲಿ ತೃತೀಯ ಬಹುಮಾನ ಪಡೆದಿದ್ದರು. ಠಾಣೆಯ ಎಸ್ .ಐ ಜಂಬೂರಾಜ್ ಮಹಾಜನ್ ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಿದರು.










