ಅಜ್ಜಾವರ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

0

ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

ಅಜ್ಜಾವರದ ಸರಕಾರಿ ಪ್ರೌಢಶಾಲೆಯಲ್ಲಿ ಸಾಧಕರ ವಿದ್ಯಾರ್ಥಿಗಳಿಗೆ ದಾನಿಗಳ ಪ್ರೋತ್ಸಾಹಧನ ವಿತರಣೆ, ವಿವಿಧ ಸಂಘಗಳ ಉದ್ಘಾಟನೆ, ಹಿಂದಿನ ಎಸ್‌ಡಿಎಂಸಿ ಸಮಿತಿಯವರಿಗೆ ಬೀಳ್ಕೊಡುಗೆ ಹಾಗೂ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು. ೭ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕ ಗೋಪಿನಾಥ ಮೆತ್ತಡ್ಕ ವಹಿಸಿದ್ದರು. ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ದೇವಕಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿ ಯಲ್ಲಿ ಡಿಸ್ಟಿಂಕ್ಷನ್ ಪಡೆದ ೯ ವಿದ್ಯಾರ್ಥಿಗಳಿಗೆ ದಾನಿ ಲೋಕಯ್ಯ ಮಾಸ್ತರ್ ಅತ್ಯಾಡಿ ಪ್ರೋತ್ಸಾಹಧನ ವಿತರಿಸಿ ಶುಭಹಾರೈಸಿದರು. ಇನ್ನೋರ್ವ ದಾನಿ, ನಿವೃತ್ತ ಪ್ರಾಂಶುಪಾಲ ಮನಮೋಹನ ಮುಡೂರು ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿ ಶುಭಹಾರೈಸಿದರು. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಶ್ರೀಮತಿ ಲೀಲಾ ಮನಮೋಹನ್, ರಾಮಚಂದ್ರ ಪಲ್ಲತ್ತಡ್ಕ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ, ನೂತನ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಉಪಾಧ್ಯಕ್ಷ ಶೌಕತ್ ಆಲಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚನಿಯ ಕಲ್ತಡ್ಕ, ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್, ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ಜತ್ತಪ್ಪ, ವಿದ್ಯಾರ್ಥಿ ಸಂಘದ ನಾಯಕಿ ಧರಿತ್ರಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ಹಿಂದಿ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರಿಗೆ ಹಾಗೂ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಭೂಮಿಕಾ, ಧರಿತ್ರಿ, ನಿಹಾ, ಮಿಹೌಸಾನ ಪ್ರಾರ್ಥಿಸಿದರು. ಶಿಕ್ಷಕರಾದ ಚಂದ್ರಶೇಖರ ಭಟ್ ಮತ್ತು ಉಮಾವತಿ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕರುಗಳಾದ ನಿರಂಜನ್ ಮತ್ತು ರಾಜೇಶ್ವರಿ ವಿವಿಧ ಸಂಘಗಳನ್ನು ಪರಿಚಯಿಸಿದರು. ಶಿಕ್ಷಕಿ ವಿದ್ಯಾಶಂಕರಿ ಸ್ವಾಗತಿಸಿ, ಶಿಕ್ಷಕಿ ರೇವತಿ ವಂದಿಸಿದರು. ಶಿಕ್ಷಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.