ವಿನೋಬಾನಗರದಲ್ಲಿ ಶ್ರೀ ಗಣೇಶ್ ಕ್ಯಾಶ್ಯೂಸ್ ಸಂಸ್ಥೆ ಶುಭಾರಂಭ

0

ಕ್ಯಾಶ್ಯೂಸ್ ಮತ್ತು ಡ್ರೈಫ್ರುಟ್ಸ್ ಮಳಿಗೆ

ಜಾಲ್ಸೂರು ಗ್ರಾಮದ ವಿನೋಬಾನಗರದಲ್ಲಿ ಸುಬ್ರಾಯ ಅನಂತ ಕಾಮತ್ ಆಂಡ್ ಸನ್ಸ್ ಸಂಸ್ಥೆಯ ಉಸ್ತುವಾರಿಕೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಶ್ರೀ ಗಣೇಶ್ ಕ್ಯಾಶ್ಯೂಸ್ ಜು.9ರಂದು ಲೋಕಾರ್ಪಣೆಗೊಂಡಿತು.

ಅರ್ಚಕರಾದ ಶ್ರೀವರ ಪಾಂಗಾಣ್ಣಾಯ ರವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಗಳು ನಡೆದವು.

ಬೆಳಗ್ಗೆ 10 ಗಂಟೆಗೆ ಮೊಗರ್ನಾಡು ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ‌ ಮೊಕ್ತೇಸರರಾದ ಮೊಗರ್ನಾಡು ಜನಾರ್ದನ ವಾಸುದೇವ ಭಟ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಶ್ರೀಮತಿ ಶುಭಾ ಸುಧಾಕರ ಕಾಮತ್ ರವರು ದೀಪ ಬೆಳಗಿದರು.

ಸಂಸ್ಥೆಯ ಆಡಳಿತ ಪಾಲುದಾರರಾದ ಸುಧಾಕರ ಕಾಮತ್, ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್, ಕೃಷ್ಣ ಕಾಮತ್ ಅರಂಬೂರು, ವಿಕ್ರಂ ಸಿಂಹ ಕಾಮತ್, ಶ್ರೀಮತಿ ಸುಮನ್ ಕಾಮತ್, ಗೋಪಾಲರಾವ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.

ಸುಧಾಕರ ಕಾಮತ್ ರವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.

ನೂತನ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಕ್ಯಾಶ್ಯೂಸ್ ಮತ್ತು ಡ್ರೈಫ್ರುಟ್ಸ್ ಮತ್ತು ಇತರ ವಸ್ತುಗಳು ದೊರೆಯಲಿದೆ.