
ಮೋದಿ ಸರಕಾರದ ಯಶಸ್ವಿ ೧೧ನೇ ವರ್ಷದ ಆಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ಅರಂತೋಡಿನಲ್ಲಿ ಜು. ೭ರಂಂದು ನಡೆಯಿತು.















ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ೧೧ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುವ ಸಂದರ್ಭದಲ್ಲಿ ಸಂಕಲ್ಪದಿಂದ ಸಾಧನೆಯೆಡೆಗೆ ಕಾರ್ಯಕ್ರಮದ ಪ್ರಯುಕ್ತ, ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಹರೀಶ್ ಕಂಜಿಪಿಲಿಯವರ ನೇತೃತ್ವದಲ್ಲಿ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ. ಜೆ. ಪಿ. ಶಕ್ತಿ ಕೇಂದ್ರ ಗಳಾದ ಅರಂತೋಡು ಮತ್ತು ತೊಡಿಕಾನ ಶಕ್ತಿಗಳ ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮವು ಆರಂತೋಡು ಶಕ್ತಿ ಕೇಂದ್ರದ ವ್ಯಾಪ್ತಿಯ ಉಳುವಾರು ಯು. ಎಂ. ಕಿಶೋರ್ ಕುಮಾರ್ ರವರ ಜಮೀನು ನಲ್ಲಿ ಮತ್ತು ತೊಡಿಕಾನ ಶಕ್ತಿ ಕೇಂದ್ರದ ವ್ಯಾಪ್ತಿಯ ಸಂತೋಷ್ ಕುತ್ತಮೊಟ್ಟೆಯವರ ಜಮೀನುನಲ್ಲಿ ನಡೆಯಿತು.
ಬಿ. ಜೆ. ಪಿ. ಮಂಡಲ ಸಮಿತಿ ಪದಾಧಿಕಾರಿಗಳು, ಗುತ್ತಿಗಾರು ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪದಾಧಿಕಾರಿಗಳು, ವಿವಿಧ ಬೂತ್‌ಗಳ ಪದಾಧಿಕಾರಿಗಳು ಹಾಗೂ ಪಕ್ಷ ದಿಂದ ಆಯ್ಕೆಯಾದ ಪಂಚಾಯತ್ ಮತ್ತು ಸಹಕಾರಿ ಸಂಘದ ಜನಪ್ರತಿನಿಧಿಗಳು ಇದ್ದರು.










