ನಡುಗಲ್ಲಿನ ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರಕ್ಕಾಗಿ ವಿವಿಧ ಸಮಿತಿಗಳ ರಚನಾ ಸಭೆ

0

ಸಂಘ ಸಂಸ್ಥೆಗಳ, ಧಾರ್ಮಿಕ ಕೇಂದ್ರಗಳ, ಸಾರ್ವಜನಿಕರು ಭಾಗಿ

ನಾಲ್ಕೂರು ಗ್ರಾಮದ ನಡುಗಲ್ಲಿನಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ನೂತನ ಕ್ಷೇತ್ರ
ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದಲ್ಲಿ ಊರಿನ ಸಮಸ್ತ ಬಾಂಧವರ ಸಭೆಯು ಜವಾಹಾರ್ ಯುವಕ ಮಂಡಲದ ಸಭಾಂಗಣದಲ್ಲಿ ಜು. 13 ರಂದು ನಡೆಯಿತು.

ಸಭೆಯಲ್ಲಿ ಟ್ರಸ್ಟ್ ಮಾಡಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಲಾಯಿತು. ನೂತನ ರಚಿಸಲು ಉದ್ದೇಶಿಸಿದ್ದ ಜೀರ್ಣೋದ್ಧಾರ ಸಮಿತಿ, ಮಹಿಳಾ ಸಮಿತಿ, ತರುಣ ಸಮಿತಿಗಳಿಗೆ ಸದಸ್ಯರನ್ನು ರಚಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದ ಟ್ರಸ್ಟ್ ನ ಅಧ್ಯಕ್ಷ ರಾಮಚಂದ್ರ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀಮತಿ ನಿರ್ಮಲ ಪದ್ಮನಾಭ ಪರಮಲೆ, ಟ್ರಸ್ಟ್ ಉಪಾಧ್ಯಕ್ಷ ರವೀಂದ್ರ ಕೊರ್ಬಟ, ಸ್ಥಳ ಧಾನಿಗಳಾದ ಲೋಕನಾಥ ನಡುಗಲ್ಲು, ಮೋನಪ್ಪ ಕುತ್ಯಾಳ, ವಸಂತ ಉತ್ರಂಬೆ, ಮೋಹಿನಿ ಉತ್ರಂಬೆ, ದಿನೇಶ್ ನಳಿಯಾರು, ಹರಿಣಾಕ್ಷಿ ವಲ್ಪಾರೆ, ಸೀತಮ್ಮ ದೋಳ್ತಿಲ ಊರಿನ ಪ್ರಮುಖರಾದ ಉಮೇಶ್ ನಡುಗಲ್ಲು ಉಪಸ್ಥಿತರಿದ್ದರು. ‌ಪ್ರಮೀಳಾ ಎರ್ದಡ್ಕ ಪ್ರಾರ್ಥಿಸಿದರು. ವಿಜಯಕುಮಾರ್ ಚಾರ್ಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ಪಾಲ್ತಾಡು ವರದಿ ಮಂಡಿಸಿದರು.
ದಿನೇಶ್ ಅತ್ಯಾಡಿ ಟ್ರಸ್ಟ್, ಸಮಿತಿಗಳ ರಚನೆ ಬಗ್ಗೆ ದಿನೇಶ್ ಅತ್ಯಾಡಿ ಮಾಹಿತಿ ನೀಡಿದರು. ‌ ದಿನೇಶ್ ನಳಿಯಾರು ಸ್ವಾಗತಿಸಿ, ನವೀನ್ ಬಾಳುಗೋಡು ವಂದಿಸಿದರು. ಮೋಹನ್ ಎರ್ದಡ್ಕ ಕಾರ್ಯಕ್ರಮ ನಿರೂಪಿಸಿದರು