ಸುಳ್ಯದಲ್ಲಿ ಶಕ್ತಿ – ಸಂಭ್ರಮಾಚರಣೆ
30 ವರ್ಷದಲ್ಲಿ ಇಲ್ಲಿ ಆಡಳಿತ ನಡೆಸಿದವರಿಂದ ಆಗದ ಕೆಲಸ ನಮ್ಮ ಸರಕಾರ ಮಾಡಿದೆ : ಅದನ್ನು ಅವರೂ ಕೂಡಾ ಸ್ವಾಗತಿಸುತ್ತಿದ್ದಾರೆ

ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವ ಹಿನ್ನಲೆಯಲ್ಲಿ ಶಕ್ತಿ – ಸಂಭ್ರಮಾಚರಣೆ ಕಾರ್ಯಕ್ರಮ ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜು.14ರಂದು ಮುಂಜಾನೆ ನಡೆಯಿತು.

ಬಸ್ ನಿಲ್ದಾಣದಲ್ಲಿ ಸೇರಿದ ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿ ಶಕ್ತಿ ಯೋಜನೆಯ 500 ಕೋಟಿ ಫಲಾನುಭವಿಗಳು ಸರಕಾರದ ಯೋಜನೆ ಪಡೆದುಕೊಂಡಿರುವುದಕ್ಕೆ ಸಾಧನೆಯ ಸ್ಟಿಕ್ಕರ್ ಬಿಡುಗಡೆಗೊಳಿಸಿ, ಸಂಭ್ರಮಾಚರಣೆ ನಡೆಸಿದರು. ಅರ್ಚಕರಾದ ಶಿವಪ್ರಸಾದ್ ಕರಿಯಮೂಲೆ ಯವರ ಪೌರೋಹಿತ್ಯದಲ್ಲಿ ಬಸ್ ಗಳಿಗೆ ಪೂಜೆ ನಡೆಸಿ, ಸಿಹಿ ಹಂಚಲಾಯಿತು. ಪಟಾಕಿ ಸಿಡಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ರವರು ಸರಕಾರದ ಯೋಜನೆಯ ಕುರಿತು ಮಾತನಾಡಿ, ಶಕ್ತಿ ಯೋಜನೆಗೆ ಸುಳ್ಯ ತಾಲೂಕಿಗೆ ಸರಕಾರ 38 ಕೋಟಿ 89 ಲಕ್ಷ ಖರ್ಚು ಮಾಡಿದೆ. 7 ಕೋಟಿ 88 ಲಕ್ಷ ಮಂದಿ ಫಲಾನುಭವಿಗಳಾಗಿ ಪ್ರಯಾಣಿಸಿದ್ದಾರೆ ಇದು ನಮ್ಮ ಸರಕಾರದ ಸಾಧನೆ. ಈಗಾಗಲೇ ಮಡಪ್ಪಾಡಿಗೆ ಬಸ್ ಆರಂಭವಾಗಿದೆ. ಇಂದಿನಿಂದ ಸುಳ್ಯ – ಕೂರ್ನಡ್ಕ, ಸುಬ್ರಹ್ಮಣ್ಯ – ದುಗಲಡ್ಕ – ಕೊಡಿಯಾಲಬೈಲು- ಸುಳ್ಯ ಬಸ್ ಆರಂಭಿಸಿದ್ದೇವೆ. ಇದು ನಮ್ಮ ಸರಕಾರದ ಸಾಧನೆ. 30 ವರ್ಷದಿಂದ ಸುಳ್ಯದಲ್ಲಿ ಆಡಳಿತ ಮಾಡುತ್ತಿರುವವರಿಗೆ ಇದು ಸಾಧ್ಯವಾಗಿಲ್ಲ. ಈಗ ನಾವು ಮಾಡಿದ ಕೆಲಸವನ್ನು ಅವರು ಮಾಡಿದ್ದೆಂದು ಬಸ್ ಬರುವಾಗ ಎದುರು ನಿಂತು ಸ್ವಾಗತಿಸುತ್ತಿದ್ದಾರೆ. ನಮ್ಮ ಕೆಲಸವನ್ನು ಎಲ್ಲರೂ ಮೆಚ್ಚಿದ್ದಾರೆ” ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಮಾತನಾಡಿ, “ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಜನತೆಗೆ ನೀಡಿದ ವಾಗ್ದಾನ ಈಡೇರಿಸಿದ ಕೀರ್ತಿ ಕಾಂಗ್ರೆಸ್ ಸರಕಾರದ್ದು” ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಕಾಂತಿ ಬಿ.ಎಸ್. ಮಾತನಾಡಿ “ಮಹಿಳೆಯರಿಗೆ ನಿಜವಾಗಿಯೂ ಗ್ಯಾರಂಟಿ ಯೋಜನೆ ಶಕ್ತಿ ನೀಡಿದೆ” ಎಂದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ “ಸರಕಾರದ ಯೋಜನೆ ಎಲ್ಲರೂ ಪಡೆದುಕೊಳ್ಳಬೇಕು” ಎಂದು ಹೇಳಿದರು.








ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ “ಸರಕಾರದ ಯೋಜನೆ ಜನರಿಗೆ ತಲುಪಿಸಲು ಅಧಿಕಾರಿಗಳು ಉತ್ಸಾಹ ತೋರಬೇಕು” ಎಂದರು.
ಕೆ.ಪಿ.ಸಿ.ಸಿ. ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಮಾತನಾಡಿ, “ಸರಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದೆ” ಎಂದರು.
ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫ ಮಾತನಾಡಿ “ನುಡಿದಂತೆ ನಡೆದ ಸರಕಾರ ಕಾಂಗ್ರೆಸ್ ಸರಕಾರ. ಜನಪರವಾಗಿ ಕೆಲಸ ಮಾಡುತ್ತಿದೆ” ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್,
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಸುಂದರಿ ಮುಂಡಡ್ಕ, ಲಲನಾ ಕೆ.ಆರ್., ವಿಮಲ ಪ್ರಸಾದ್, ಸುಜಯ ಕೃಷ್ಣ, ಲಿಸ್ಸಿ ಮೋನಾಲಿಸ,
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ಭವಾನಿಶಂಕರ ಕಲ್ಮಡ್ಕ, ಲತೀಫ್ ಅಡ್ಕಾರ್, ರಾಜು ನೆಲ್ಲಿಕುಮೇರಿ, ಧನುಷ್ ಕುಕ್ಕೆಟ್ಟಿ, ಶೇಖರ್ ಕಣೆಮರಡ್ಕ, ಶಿಲ್ಪಾ ಇಬ್ರಾಹಿಂ, ಸೋಮಶೇಖರ್ ಕೇವಳ, ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನ.ಪಂ. ನಾಮನಿರ್ದೇಶನ ಸದಸ್ಯ ರಾಜು ಪಂಡಿತ್, ರಾಜಾರಾಂಬೆಟ್ಟ, ಕೆ.ಗೋಕುಲ್ ದಾಸ್, ಜಯರಾಮ ಬೆಟ್ಟ, ಮಹೇಶ್ ಬೆಳ್ಳಾರ್ಕರ್, ಭೋಜಪ್ಪ ನಾಯ್ಕ್, ಸುರೇಶ್ ಎಂ.ಹೆಚ್., ಶಿವಕುಮಾರ್ ಕಂದಡ್ಕ, ಮಂಜುನಾಥ್ ಮಡ್ತಿಲ, ಧರ್ಮಪಾಲ ಕೊಯಿಂಗಾಜೆ, ನ.ಪಂ.ಸದಸ್ಯ ಡೇವಿಡ್ ಧೀರ ಕ್ರಾಸ್ತ, ರಂಜಿತ್ ಮೇನಾಲ, ಜಯಪ್ರಕಾಶ್ ನೆಕ್ರೆಪ್ಪಾಡಿ, ಚಿತ್ರಾವತಿ ಪಾಲಡ್ಕ, ಸತ್ಯಕುಮಾರ್ ಆಡಿಂಜ ಮೊದಲಾದವರಿದ್ದರು.
ಸುಳ್ಯದಿಂದ ಕೂನಡ್ಕ ಬಸ್ನ ಪ್ರಥಮ ಪ್ರಯಾಣಿಕರಾಗಿ ಕೆ.ಗೋಕುಲ್ ದಾಸ್ ಟಿಕೆಟ್ ಖರೀದಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.










