








2024-2025 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಮಾದ್ಯಮದಲ್ಲಿ ಡಿಸ್ಟಿಂಕ್ಷನ್ ಆಂಕ ಪಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ
ಮನೆಯ ವಿದ್ಯಾರ್ಥಿಗಳಿಗೆ ದ ಕ ಜಿಲ್ಲಾ ಹಾಲು ಒಕ್ಕೂಟ ಮಂಗಳೂರು ಇದರ ವತಿಯಿಂದ ತಾಲೂಕುವಾರು ಅಧ್ಯಕ್ಷರು,ಕಾರ್ಯದರ್ಶಿಗಳ ಸಮಾಲೋಚನಾ ಸಭೆಯಲ್ಲಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು . ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ತಾರನಾಥ ಪಲ್ಲೋಡಿರವರ ಪುತ್ರಿ ಬೃಂದಾ ಪಲ್ಲೋಡಿ ರವರು ನಗದು-ಪ್ರಶಸ್ತಿ ಪಡೆದಿದ್ದಾರೆ. ಈ ವೇಳೆ ಅವರ ತಾಯಿ ಶ್ರೀಮತಿ ಲೀಲಾವತಿ ಉಪಸ್ಥಿತರಿದ್ದರು.











