ಸಂಪಾಜೆ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮ

0

ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಸಂಪಾಜೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಕಾರ್ಯಕ್ರಮವು ಸಂಪಾಜೆ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಜು.19 ರಂದು
ನಡೆಯಿತು .

ಪದಗ್ರಹಣಧಿಕಾರಿ ಲಯನ್ ಗೋವರ್ಧನ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ಕಿಶೋರ್ ಕುಮಾರ್ ಕೆ ಕಾರ್ಯದರ್ಶಿ ಯಾಗಿ ಲಯನ್ ನಳಿನಿ ಕಿಶೋರ್, ಕೋಶಾಧಿಕಾರಿ ಯಾಗಿ ಲಯನ್ ಪ್ರಶಾಂತ್ ಇವಿ ಅಧಿಕಾರ ಸ್ವೀಕರಿಸಿದರು .
ಚಾರ್ಟರ್ ನೈಟ್ ಕಾರ್ಯಕ್ರಮ ದಲ್ಲಿ ಸ್ಥಾಪಕ ಸದಸ್ಯರಾದ ಲಯನ್ ಸಚಿತ್ ಕುಮಾರ್ ರೈ ಮತ್ತು ಲಯನ್ ನವೀನ್ಚಂದ್ರ ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಸೇವಾ ಚಟುವಟಿಕೆ ಯಲ್ಲಿ ಕ್ಲಬಿನ ಮೂವರು ಮಹಿಳಾ ಉದ್ಯಮಿ ಗಳಾದ ಲಯನ್ ಸಂದ್ಯಾ ಸಚಿತ್ ರೈ (ರಾಧಾ ಆಯಿಲ್), ಲಯನ್ ಧನಲಕ್ಷ್ಮೀ ನವೀನ್ (ಉಲ್ಲನ್ ಉತ್ಪನ್ನಗಳ ತಯಾರಿ ಮತ್ತು ಮಾರಾಟ), ಲಯನ್ ಲೆಸ್ಸಿ ಸಿಲ್ವೆ ಸ್ಟರ್ (ಡ್ರೈವಿಂಗ್ ಸ್ಕೂಲ್) ಇವರನ್ನು ಮಹಿಳಾ ಸಬಲೀಕರಣ ಅಡಿಯಲ್ಲಿ ಗೌರವಿಸಲಾಯಿತು.

ಲಯನ್ ಲೆಸ್ಸಿ ಸಿಲ್ವೆಸ್ಟರ್ ಯವರಿಂದ ಬಡ ವಿದ್ಯಾರ್ಥಿಗೆ ರೂ. 8000/- ಪ್ರೋತ್ಸಾಹ ಧನ,
ನೂತನ ಅಧ್ಯಕ್ಷರಿಂದ ಲಯನ್ ಸೇವಾ ಟ್ರಸ್ಟ್ ಗೆ 25000/-
ರಾಮ ಕೃಷ್ಣ ಭಜನಾ ಮಂದಿರ ಕ್ಕೆ ರೂ 10000/- ದೇಣಿಗೆ ನೀಡಿದರು.

ವೇದಿಕೆ ಯಲ್ಲಿ ಪ್ರಾಂತಿಯ ಅಧ್ಯಕ್ಷರಾದ ಲಯನ್ ರಂಗಯ್ಯ ಶೆಟ್ಟಿಗಾರ್, ವಲಯಧ್ಯಕ್ಷ ಲಯನ್ ಚಂದ್ರಶೇಖರ ನಂಜೆ, ನಿಕಟಪೂರ್ವ ಅಧ್ಯಕ್ಷರಾದ ಲಯನ್ ಪಾರ್ವತಿ ರವರು ಪ್ರಸ್ತಾವಿಕ ಮಾತುಗಳನ್ನಾಡಿದರು . ಬೆಳ್ಳಾರೆ ಜಲದುರ್ಗ ಲಯನ್ಸ್ ಕ್ಲಬ್, ಕುಕ್ಕೆ ಸುಬ್ರಮಣ್ಯ ಲಯನ್ಸ್ ಕ್ಲಬ್, ಪಂಜ ಲಯನ್ಸ್ ಕ್ಲಬ್, ಗುತ್ತಿಗಾರ್ ಲಯನ್ಸ್ ಕ್ಲಬ್, ಕಡಬ ಲಯನ್ಸ್ ಕ್ಲಬ್, ಸುಳ್ಯ ಲಯನ್ಸ್ ಕ್ಲಬಿ ನಿಂದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಎಂ ಶಂಕರನಾರಾಯಣ ಭಟ್, ಕಲ್ಲುಗುಂಡಿ ರಾಮಕೃಷ್ಣ ಭಜನ ಮಂದಿರ ದ ಅಧ್ಯಕ್ಷ ರಾದ ರಾಜಗೋಪಾಲ್, ಕೋಶಾಧಿಕಾರಿ ಶ್ರೀಧರ್, ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಯಕ್ಷಗಾನ ಸೇವಾ ಸಂಘ ಕಲ್ಲುಗುಂಡಿ ಇದರ ಸಂಚಾಲಕರಾದ ಈಶ್ವರ ಆಚಾರ್ಯ, ವಿವಿಧ ಸಂಫ ಸಂಸ್ಥೆ ಯ ಆಹ್ವಾನಿತರು ಉಪಸ್ಥಿತರಿದ್ದರು.

ಕಾರ್ಯಕ್ರಮ ವನ್ನು ಲೋಕ್ಯಾ ನಾಯ್ಕ್ ಮತ್ತು ಧನಲಕ್ಷ್ಮಿ ನವೀನ್ ನಿರೂಪಿಸಿ, ಲಯನ್ ನಳಿನಿ ಕಿಶೋರ್ ವಂದಿಸಿದರು. ಮಾನ್ವಿ ಮತ್ತು ಧರ್ಮ ಕಿಶೋರ್ ಸಹಕರಿಸಿದರು