ಕೋಲ್ಚಾರು ರಸ್ತೆಯ ಕುಂಭಕೋಡು ಎಂಬಲ್ಲಿ ಬರೆಗೆ ಗುದ್ದಿದ ಕಾರು – ಚಾಲಕ ಪಾರು

0

ಕೋಲ್ಚಾರಿನಿಂದ ಸುಳ್ಯಕ್ಕೆ ಬರುತ್ತಿದ್ದ ಕಾರೊಂದು ಕುಂಭಕೋಡು ಎಂಬಲ್ಲಿ ಬರೆಗೆ ಗುದ್ದಿ ಕಾರು ಜಖಂ ಗೊಂಡ ಘಟನೆ ಜು.22 ರಂದು ವರದಿಯಾಗಿದೆ.

ಕೋಲ್ಚಾರಿನ ಯುವ ಮುಖಂಡ ಪ್ರದೀಪ್ ಕೊಲ್ಲರಮೂಲೆ ಯವರು ಚಲಾಯಿಸಿಕೊಂಡು ಬರುತ್ತಿದ್ದ ನಿಸಾನ್ ಮಿಕ್ರಾ ಕಾರುಅಫಘಾತಗೀಡಾಗಿರುವುದು. ಕಾರಿನ ಸ್ಟೇರಿಂಗ್ ಎಂಡ್ ತುಂಡಾಗಿ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣಕಳೆದುಕೊಂಡು ರಸ್ತೆ ಬದಿಯ ಬರೆಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ‌ಪ್ರದೀಪ್ ಕೊಲ್ಲರಮೂಲೆಯವರು ಮಾತ್ರ ಸಂಚರಿಸುತ್ತಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಕಾರಿನ ಮುಂಭಾಗ
ಮತ್ತು ಹಿಂಭಾಗ ಜಖಂಗೊಂಡಿದೆ.