ಕೆಂಪು ಕಲ್ಲು, ಮರಳು ಸಮಸ್ಯೆ ಮತ್ತು ಕಟ್ಟಡ ಕಾರ್ಮಿಕರ ಇತರ ಬೇಡಿಕೆಗಳನ್ನು ಸರಳೀಕರಣಗೊಳಿಸುವಂತೆ ಆಗ್ರಹ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಸಂಘಟನೆ ಸಿ ಡಬ್ಲ್ಯೂ ಎಫ್ ಐ ಹಾಗೂ ಸಿ ಐ ಟಿ ಯು ಸುಳ್ಯ ವತಿಯಿಂದ ಸುಳ್ಯದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ಜು.22 ರಂದು ನಡೆಯಿತು.

ಮುಖ್ಯ ಭಾಷಣಕಾರರು ದ. ಕ. ಜಿಲ್ಲಾ ಅಧ್ಯಕ್ಷರಾದ ಸಿ ಡಬ್ಲ್ಯೂ ಕಾಂ। ವಸಂತ ಎಫ್ ಐ ಆಚಾರಿ ರವರು ಭಾಗವಹಿಸಿ ಮಾತನಾಡಿ
ಕಟ್ಟಡ ಕಾರ್ಮಿಕರಿಗೆ ಆಗುವ ಅನ್ಯಾಯದ ಬಗ್ಗೆ ಸರಕಾರವು ‘ ಎಚ್ಚೆತ್ತುಕೊಂಡು ಈ ಕೂಡಲೆ ಕಟ್ಟಡ ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆನ್ನುವ ನಿಟ್ಟಿನಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಮರಳು ಮತ್ತು ಕೆಂಪು ಕಲ್ಲು ಗಳ ಸರಬರಾಜು ಇಲ್ಲದೆ ಅನೇಕ ರೀತಿಯ ಸಮಸ್ಯೆ ಉಂಟಾಗಿದೆ.

ಕಳೆದ 45 ದಿನಗಳಿಂದ ಕಾರ್ಮಿಕರಿಗೆ ಕೆಲಸ ವಿಲ್ಲದೆ ಜೀವನಕ್ಕೂ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣ ವಾಗಿದೆ.
ಆದ್ದರಿಂದ ತೊಂದರೆ ಗೀಡಾಗಿರುವ ಎಲ್ಲಾ ಕಾರ್ಮಿಕರಿಗೂ ಸರಕಾರ ತಿಂಗಳಿಗೆ 10 ಸಾವಿರ ರೂ ಪರಿಹಾರ ಕೊಡಬೇಕು.
ಬಡವರ ಜೀವನದ ಹೋರಾಟ ಈ ಪ್ರತಿಭಟನೆ ಯಾಗಿದ್ದು ಇದನ್ನು ಕಳೆದ ಕೆಲ ದಿನಗಳ ಹಿಂದೆ ಬಿ ಎಂ ಎಸ್ ಎಂಬ ಬಿ ಜೆ ಪಿ ಬೆಂಬಲಿತ ಸಂಘಟನೆ ರಾಜಕೀಯವಾಗಿ ಬಳಸಿ ಕ್ಕೊಂಡು ನಮ್ಮ ಸಂಘಟನೆಯ ಬಗ್ಗೆ ಏನೆಲ್ಲಾ ತಪ್ಪು ಸಂದೇಶವನ್ನು ಹೇಳಿದೆ.ಆದರೆ ಇವರಿಂದ ನಮಗೆ ಹೋರಾಟ ಕಲಿಯ ಬೇಕಾಗಿಲ್ಲ.ನಮ್ಮ ನಾಯಕ ರುಗಳು ಅನೇಕ ಮಂದಿ ತಮ್ಮ ಜೀವವನ್ನು ತ್ಯಾಗ ಮಾಡುವ ಮೂಲಕ ಬೆಳೆಸಿ ದ್ದಾರೆ.ದೇಶದ ಸ್ವಾತಂತ್ರ್ಯ ವೇಳೆ ಬ್ರಿಟಿಷರಿಂದ ನೇಣು ಕಂಬವನ್ನು ಹೇರಿದವರಾಗಿದ್ದಾರೆ.
ಇವರುಗಳ ನಾಯಕರಾಗೆ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ ಹೇಡಿತನ ಪ್ರದರ್ಶನ ಮಾಡಿ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಂಘಟನೆ ಸಂವಿಧಾನ ಬದ್ದವಾಗಿ ದೇಶದಲ್ಲಿ ಬೆರೂರಿ ನಿಂತಿದೆ ಎಂದು ಹೇಳಿದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಸಂಘಟನೆಯ ಅಧ್ಯಕ್ಷ ವಿಶ್ವನಾಥ್ ನೆಲ್ಲಿ ಬಂಗಾರಡ್ಕ ವಹಿಸಿದ್ದರು.















ಕಾರ್ಯದರ್ಶಿ ವಸಂತ ಪೆಲ್ತಡ್ಕ,ರಾಜ್ಯ ಸಮಿತಿ ಸದಸ್ಯ ಬಿಜು ಅಗಸ್ಟಿನ್, ತಾಲೂಕು ಸಮಿತಿ ಉಪಾಧ್ಯಕ್ಷರು ಗಳಾದ ಎಚ್ ಕೆ ನಾಗರಾಜ, ಆನಂದ ಗೌಡ, ಮಂಜು ಮೇಸ್ತ್ರಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧಿವಾಕರ್ ಪೈ, ಇಂಜಿನಿಯರ್ ಸಂಘದ ಅಧ್ಯಕ್ಷ ವಿಜಯ ಇಂಜಿನಿಯರ್,ಹಾಗೂ ಮುಖಂಡರುಗಳಾದ ಶ್ರೀಧರ್ ಕಡೆಪ್ಪಾಲ, ನೆಲ್ಸನ್ ಹಳೆಗೇಟು, ಅಬೂಬಕ್ಕರ್ ಜಟ್ಟಿಪಳ್ಳ, ಮೊದಲಾದ ವರು ಉಪಸ್ಥಿತರಿದ್ದರು.
ಕಾರ್ಮಿಕ ಮುಖಂಡ ಉಸ್ಮಾನ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭೆಯಲ್ಲಿ ಇಂಕಿಲಾಬ್ ಘೋಷಣೆ ಮತ್ತು ಕೆಂಪು ಕಲ್ಲು ಮತ್ತು ಮರಳು ಆದಷ್ಟು ಬೇಗ ಕಾನೂನು ರೀತಿಯಲ್ಲಿ ಒದಗಿಸಬೇಕು ಮತ್ತು ಕಾರ್ಮಿಕರಿಗೆ ಮಾಸಿಕ 10 ಸಾವಿರ ಪರಿಹಾರ ನೀಡಬೇಕೆಂದು ಘೋಷಣೆ ಕೂಗಿದರು.
ಬಳಿಕ ಮುಖಂಡರುಗಳು ತಾಲೂಕು ಕಚೇರಿಗೆ ತೆರಳಿ ತಮ್ಮ ಮನವಿಯನ್ನು ಅಧಿಕಾರಿಗಳಿಗೆ ನೀಡಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಸಂಘಟನೆಗೆ ಸಂಬಂಧಪಟ್ಟ ಅನೇಕ ಮಂದಿ ಕಾರ್ಮಿಕ ವರ್ಗದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.










