ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಆಚರಣೆ ಮತ್ತು ಆರೋಗ್ಯ ಪೂರ್ಣ ಪಾಲೆ ಮರದ ಕಷಾಯ

0

ಆಟಿ ಅಮಾವಾಸ್ಯೆ ತುಳುವರಿಗೆ ಬಹಳ ವಿಶೇಷ ದಿನವಾಗಿದೆ.ಕರಾವಳಿ ಪ್ರದೇಶದ ಜನ ಹೆಚ್ಚಾಗಿ ಪ್ರಕೃತಿಯ ಆರಾಧಕರು ನಾಗಾರಾಧನೆ,ದೈವ ಆರಾಧನೆಯನ್ನು ನಂಬಿಕೊಂಡು ಬಂದವರು,ಈ ಅಮವಾಸ್ಯೆ ದಿನ ತುಳುನಾಡಿನ ಬಹುತೇಕ ಜನ ಪಾಲೇ ಮರದ ತೊಗಟೆ ಕೆತ್ತಿ ಅದರ ರಸವನ್ನು ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ತನ್ನ ಪ್ರಾಚೀನ ಆಚರಣೆಗಳು ಹಾಗೂ ವಿಶಿಷ್ಟವಾದ ಇದರಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ಶಿಸ್ತು ಬದ್ಧ ಮತ್ತು ಕಠಿಣ ಪರಿಶ್ರಮದ ಜೀವನ ಶೈಲಿಯ ಜೊತೆಗೆ ಆಹಾರ ಕ್ರಮವು ಆರೋಗ್ಯವಂತರನ್ನಾಗಿ ಮಾಡುತ್ತದೆ. ಪೂರ್ವಜರು ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದ ಆಚರಣೆಯನ್ನು ಇಂದಿನವರು ಅನುಸರಿಸಿಕೊಂಡು ಬರುತ್ತಿದ್ದಾರೆ.

ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದು ಪಾಲೆ(ಹಾಲೆ) ಮರದ ಕಷಾಯ.
ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳು ನಾಡಿನ ಜನರು ಆಟಿ ಅಮಾವಾಸ್ಯೆಯ ದಿನದಂದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು
ಆಟಿ ತಿಂಗಳಲ್ಲಿ ವಿಪರೀತ ಮಳೆ,ಆರೋಗ್ಯ ದೃಷ್ಟಿಯಿಂದಲೂ ರೋಗ ರುಜಿನಗಳು ಹೆಚ್ಚಾಗಿ ಈ ತಿಂಗಳಲ್ಲಿ ಕಂಡು ಬರುತ್ತದೆ.
ಈ ಹಿನ್ನೆಲೆಯಲ್ಲಿ ಹಿಂದಿನ ನಮ್ಮ ಪೂರ್ವಜರು ಆಟಿ ಕಷಾಯವನ್ನು ಸೇವಿಸುವುದರಿಂದ ದೇಹದ ಬಾಧೆಗಳು ಕಡಿಮೆಯಾಗಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತದೆ,ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿರದಲ್ಲಿಡುತ್ತದೆ.ನಮ್ಮ ಆಚರಣೆ ಪದ್ಧತಿಗಳು ವೈಜ್ಞಾನಿಕವಾಗಿ ಕೂಡ ಸಂಬಂಧ ಹೊಂದಿರುವುದನ್ನು ನಾವು ಗಮನಿಸಬಹುದು.ಪಾಲೆ ಮರ ದೈವಿಕ ಸ್ಥಾನವನ್ನು ಹೊಂದಿರುವ ಮರ,ಔಷಧಿ ಗುಣವನ್ನು ಹೊಂದಿದೆ.

ಕಷಾಯ ತೆಗೆದುಕೊಳ್ಳುವ ಕ್ರಮ
ಪಾಲೆ ಮರದ ತೊಗಟೆಯನ್ನು ಜಜ್ಜಿ ಅದರ ರಸವನ್ನು ನೀರು ಜೊತೆ ಮಿಶ್ರ ಮಾಡಿ ಸೇವಿಸಬಹುದು. ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಹಾಲೇಮರದ ಹಾಲಿಗೆ ಜೀರಿಗೆ, ಬೆಳ್ಳುಳ್ಳಿ, ಅರಶಿಣ, ಓಂಕಾಳು ಹಾಕಿ ಕಷಾಯ ರೀತಿ ಮಾಡಿ ಕುಡಿದರೆ ಉತ್ತಮ ನಂತರ ಮೆಂತೆ ಗಂಜಿ ಊಟ ಮಾಡುವ ಕ್ರಮವಿದೆ.

ವಿಶೇಷವಾಗಿ ಈ ದಿನದಂದು ತುಳುನಾಡಿನಲ್ಲಿರುವ ಕಾರಿಂಜದ ಶ್ರೀ ಕಾರಿಂಜೇಶ್ವರ ದೇವಸ್ಥಾನದಂತಹ ಶಿವ ದೇವಾಲಯಗಳಲ್ಲಿ ಆಟಿ ಅಮಾವಾಸ್ಯೆಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ನರಹರಿಪರ್ವತ ಬಂಟ್ವಾಳ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಮಹಾರಾಜ ವರಾಹ ದೇವಸ್ಥಾನ, ಮರವಂತೆ, ಕೋಟೇಶ್ವರ ದೇವಸ್ಥಾನ, ಕುಂಭಾಶಿ ದೇವಸ್ಥಾನ, ಕುಂದೇಶ್ವರ ದೇವಸ್ಥಾನ, ಶಂಕರನಾರಾಯಣ ದೇವಸ್ಥಾನ ಮತ್ತು ಇತರೆ ದೇವರ ಸನ್ನಿಧಾನಗಳಿಗೆ ಜನರು ಭೇಟಿ ನೀಡುತ್ತಾರೆ. ಬಂಟ್ವಾಳದ ಶ್ರೀ ನರಹರಿ ಸದಾಶಿವ ದೇವಸ್ಥಾನದ ಶಂಕ, ಚಕ್ರ, ಘಧ, ಪದ್ಮಾಕಾರ ಎಂಬ ನಾಲ್ಕು ಕೊಳಗಳಲ್ಲಿ ಸ್ನಾನ ಮಾಡಿದರೆ ವ್ಯಕ್ತಿಯ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ.