ನಿಂತಿಕಲ್ಲು ವಲಯದ ಶೌರ್ಯ ಘಟಕದ ಸದಸ್ಯರಿಂದ ಶ್ರಮದಾನ

0

ನಿಂತಿಕಲ್ಲು ವಲಯದ ಮುಪ್ಪೇರ್ಯ ಕಾರ್ಯಕ್ಷೇತ್ರದ ಮಂಜುಶ್ರೀ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಅಬೀದಾರವರ ಮನೆಯು ಗಾಳಿ ಮಳೆಗೆ ಸಂಪೂರ್ಣವಾಗಿ ಹಾನಿಯಾಗಿದ್ದು, ನಿಂತಿಕಲ್ಲು ವಲಯದ ಶೌರ್ಯ ಘಟಕದ ಸದಸ್ಯರು ಶ್ರಮದಾನದ ಮೂಲಕ ಹಂಚನ್ನು ಜೋಡಿಸಿ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟರು.


ಈ ಕಾರ್ಯದಲ್ಲಿ ಘಟಕದ ಸದಸ್ಯರಾದ ಗಣೇಶ, ಮಾಧವ ರಾಮಚಂದ್ರ, ಶರತ್, ರಮೇಶ್ ಕುರಿಯ, ಭವ್ಯ, ಶ್ಯಾಮಲಾ ಪೂವಮ್ಮ ಭಾಗವಹಿಸಿದ್ದರು.
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಕಾರ್ಯದರ್ಶಿ ವಿದ್ಯಾ, ಆಶಾ ಕಾರ್ಯಕರ್ತೆ ಶ್ರೀಮತಿ ಕಮಲ, ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ ಶೆಟ್ಟಿ, ಸೇವಾ ಪ್ರತಿನಿಧಿಗಳಾದ ಶ್ರೀಮತಿ ರತ್ನಾವತಿ, ಬೇಬಿ, ಶಾಲಿನಿ ಉಪಸ್ಥಿತರಿದ್ದರು.