ಮರ ಮೈಮೇಲೆ ಬಿದ್ದು ವೃದ್ದೆ ಮೃತ್ಯು
ಇಂದು ಮುಂಜಾನೆ ಭಾರೀ ಗಾಳಿ ಮಳೆಗೆ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಮರ ಬಿದ್ದ ಪರಿಣಾಮವಾಗಿ ಮಹಿಳೆ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ದಿ. ಗೋಪಾಲ ಭಂಡಾರಿ ಅವರ ಪತ್ನಿ ರುಕ್ಮಿಣಿ ಮೃತಪಟ್ಟವರು.















ರುಕ್ಮಿಣಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದು, ಇಂದು ಮುಂಜಾನೆ ಮನೆಯಿಂದ ಹೊರಗಡೆ ಕೆಲಸ ಮಾಡುತ್ತಿರುವಾಗ ಗಾಳಿ ಮಳೆಯ ಪರಿಣಾಮವಾಗಿ ಮನೆ ಸಮೀಪವಿದ್ದ ಮರದ ಗೆಲ್ಲು ತುಂಡಾಗಿ ಇವರ ಮೇಲೆ ಬಿದ್ದಿತು. ರುಕ್ಮಿಣಿಯವರು ಮರದಡಿಗೆ ಸಿಲುಕಿ ಮೃತಪಟ್ಟರು. ಊರವರಿಗೆ ವಿಷಯ ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಬಂದು ಮಹಜರು ನಡೆಸುತ್ತಿದ್ದಾರೆ. ಮೃತದೇಹವನ್ನು ಮರದಡಿಯಿಂದ ತೆಗೆಯಬೇಕಷ್ಟೇ.
ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದು ಅವರು ಕೆಲಸದ ನಿಮಿತ್ತ ಬೇರೆ ಕಡೆ ಇದ್ದಾರೆ. ಅವರ ಸಮೀಪದ ಬಂಧುಗಳು ಘಟನಾ ಸ್ಥಳಕ್ಕೆ ಬಂದಿದ್ದಾರೆ.










