ಅಲೆಟ್ಟಿ ಸದಾಶಿವ ದೇವಳದ ನಾಗಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

0

ಅಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಜು. 29 ರಂದು ವಿಶೇಷ ಪೂಜೆ ಹಾಗೂ ಅಭಿಷೇಕವು ನಡೆಯಿತು.

ಬೆಳಗ್ಗೆ ದೇವಳದ ಅರ್ಚಕ ಹರ್ಷಿತ್ ಬನ್ನಿತಾಯ ರವರ ನೇತೃತ್ವದಲ್ಲಿ ನಾಗ ದೇವರಿಗೆ ವಿಶೇಷ ಅಭಿಷೇಕವಾಗಿ ಮಹಾಮಂಗಳಾರತಿ ಬೆಳಗಿ ಪೂಜೆ ನೇರವೇರಿಸಿದರು.
ಗ್ರಾಮದ ಭಕ್ತಾದಿಗಳು ಹಾಲು ಮತ್ತು ಎಳನೀರು ತಂದು ನಾಗನಿಗೆ ಸಮರ್ಪಿಸಿದರು.


ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಾಡಿತ್ತಾಯ ಹಾಗೂ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.