ತೋಟದಿಂದ ತೆಂಗಿನಕಾಯಿ ಕಳ್ಳತನ : ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

0

ತೆಂಗಿನ ಕಾಯಿಯ ಬೆಲೆ ಗಗನಕ್ಕೇರಿರುವ ಈ ಸಂದರ್ಭ ಅದರ ಕಳ್ಳತನದ ಪ್ರಕರಣಗಳೂ ಹೆಚ್ಚು ಹೆಚ್ಚಾಗಿ ವರದಿಯಾಗುತ್ತಿವೆ. ತೆಂಗಿನಕಾಯಿ ಕಳ್ಳತನಗೈದು ರೆಡ್ ಹ್ಯಾಂಡ್ ಆಗಿ ಕಳ್ಳ ಸಿಕ್ಕಿಬಿದ್ದ ಘಟನೆ ಅರಂತೋಡು ಪೆರಾಜೆ ಪರಿಸರದಲ್ಲಿ ವರದಿಯಾಗಿದೆ.

ಅರಂತೋಡು ಪೆರಾಜೆ ಪರಿಸರದಲ್ಲಿ ಆಗಾಗ ತೆಂಗಿನಕಾಯಿ ಕಳವು ಆಗುತ್ತಿದ್ದು, ನಿನ್ನೆ ಪೆರಾಜೆಯ ದಿವಾಕರ ರೈಯವರ ತೋಟದಿಂದ ತೆಂಗಿನಕಾಯಿ ಕಳವು ಮಾಡುತ್ತಿದ್ದ ಲೋಹಿತ್ ಎಂಬಾತನನ್ನು ಮಾಲು ಸಮೇತ ಹಿಡಿದು ಬುದ್ಧಿವಾದ ಹೇಳಿ ಕಳಿಸಲಾಯಿತು.

ಈ ಬಗ್ಗೆ ಪ್ರಭಾಕರ ರೈ ಯವರನ್ನು ಸಂಪರ್ಕಿಸಿದಾಗ , ನಮ್ಮಲ್ಲಿ ಕಳೆದ ಕೆಲವು ವರ್ಷಗಳಿಂದ ಇವನು ಮತ್ತು ಕೆಲವು ಕೆಲಸ ಮಾಡದ ಕಳ್ಳರಿದ್ದಾರೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8 ಘಂಟೆ ತನಕ, ನಂತರ ಮಧ್ಯಾಹ್ನ 12.30ರಿಂದ 2.30 ರ ತನಕ, ಸಂಜೆ 5.30ರಿಂದ ರಾತ್ರಿ 12 ಗಂಟೆಯವರೆಗೆ ಕಳ್ಳತನ ಮಾಡಲಾಗುತ್ತಿದೆ. ಇವರು ಬರುವಾಗ ಗಾಳ, ಬಲೆ, ಕೂಳಿ ಮೊದಲಾದ ಮೀನು ಹಿಡಿಯುವ ಸಲಕರಣೆಯೊಂದಿಗೆ ಬಂದು ನಂತರ ಕಳ್ಳತನ ಮಾಡುತ್ತಾರೆ ಎಂದು ಹೇಳಿದರು. ಈ ಹಿಂದೆ ಹಲವು ಸಲ ಪೊಲೀಸ್ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಅವರು ಹೇಳಿದರು.