ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆಗೆ ಪ್ರಣವ್ ಪೌಂಡೇಶನ್ ಬೆಂಗಳೂರು ವತಿಯಿಂದ ಕಲಿಕಾ ಸಾಮಗ್ರಿ ಮತ್ತು ಪುಸ್ತಕ ಕೊಡುಗೆ

0

ಶ್ರಿ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡ್ಡಡ್ಕ ಇದರ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಣವ್ ಪೌಂಡೇಶನ್ ಬೆಂಗಳೂರು ವತಿಯಿಂದ ನೋಟ್ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಣವ ಫೌಂಡೇಷನ್ ನ ಅಧ್ಯಕ್ಷ ರಾಕೇಶ್ ರೈ , ಶಾಲಾ ಸಂಚಾಲಕ ಡಾ. ಜ್ಞಾನೇಶ್ ಎನ್ ಎ, ಜ್ಯೋತಿ ಪ್ರೌಢಶಾಲಾ ಮುಖ್ಯ ಶಿಕ್ಷಕ
ಜಿ.ಆರ್.ನಾಗರಾಜ್, ಜ್ಯೋತಿ ಪ್ರೌಢ ಶಾಲಾ ಸಂಚಾಲಕ ಮಹೇಶ್ ಕುಮಾರ್ ರೈ ಮೇನಾಲ, ಕಚೇರಿ ಅಧೀಕ್ಷಕಿ ಚಂದ್ರಮತಿ ಮತ್ತು ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೆ, ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು.