ದಿನವಿಡೀ ಕೆಸರಿನಲ್ಲಿ ಆಟವಾಡಿದ ಪತ್ರಕರ್ತರು

ಸುಳ್ಯದ ಪ್ರೆಸ್ ಕ್ಲಬ್ ಇದರ ಆಶ್ರಯದಲ್ಲಿ ಕೆಸರೋತ್ಸವ ಮತ್ತು ಪತ್ರಕರ್ತರ ಕೆಸರುಗದ್ದೆ ಕವಿಗೋಷ್ಠಿ ಅಜ್ಜಾವರದ ಕೊರಂಗುಬೈಲಿನಲ್ಲಿರುವ ನಿವೃತ್ತ ಅಧ್ಯಾಪಕ ಬಾಲಕೃಷ್ಣ ನಾಯ್ಕ್ ರವರ ಗದ್ದೆಯಲ್ಲಿ ಆ.5ರಂದು ನಡೆಯಿತು.


ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳರ ಅಧ್ಯಕ್ಷತೆಯಲ್ಲಿ ದಿನವಿಡೀ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ : ಕೆಸರೋತ್ಸವ ಕಾರ್ಯಕ್ರಮವನ್ನು ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ ಮತ್ತು ಸುಳ್ಯ ಮರಾಟಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದೇವಕಿ ಕಾಟಿಪಳ್ಳ, ಸಂಕೇಶ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಕೇಶ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಮತಿ ಲೀಲಾ ಮನಮೋಹನ್, ಸುಳ್ಯ ಗೋಪಾಲ್ ಸ್ಟುಡಿಯೋ ನ ನವೀನ್ ಆಚಾರ್ಯ ಕೇರ್ಪಳ, ಅಜ್ಜಾವರ ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ, ಸುಳ್ಯ ಫಾಸ್ಟ್ ಟ್ರಾಕ್ ನ ಶೈಮು, ಗದ್ದೆಯ ಮಾಲಕರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಕೆಸರೋತ್ಸವ ಸಂಚಾಲಕ ಕೃಷ್ಣಬೆಟ್ಟ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ವೇದಿಕೆಯಲ್ಲಿ ಇದ್ದರು.
ಸಮಾರಂಭದಲ್ಲಿ ನವೀನ್ ಆಚಾರ್ಯ ಕೇರ್ಪಳ ರನ್ನು ಗೌರವಿಸಲಾಯಿತು.
ಕೋಶಾಧಿಕಾರಿ ಈಶ್ವರ ವಾರಣಾಶಿ ಸ್ವಾಗತಿಸಿದರು. ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕ ಮಾತನಾಡಿದರು. ಪ್ರೆಸ್ ಕ್ಲಬ್ ನಿರ್ದೇಶಕರುಗಳಾದ ಗಂಗಾಧರ ಕಲ್ಲಪಳ್ಳಿ ವಂದಿಸಿದರು.ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ
ಕವಿಗೋಷ್ಠಿ
ಮಧ್ಯಾಹ್ನ ಕೆಸರುಗದ್ದೆ ಕವಿಗೋಷ್ಠಿ ಹಾಗೂ ಕೆಸರೋತ್ಸವ ದ ಸಮಾರೋಪ ಸಮಾರಂಭ ನಡೆಯಿತು.
ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.















ಸುಳ್ಯದ ಸರ್ಕಲ್ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಸಾಹಿತಿ ಡಾ.ಸುಂದರ ಕೇನಾಜೆ, ಡಾ.ಮನೋಹರ್ ಮೈಸೂರು, ಕೆ.ವಿ.ಜಿ. ಸುಳ್ಯಹಬ್ಬ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ, ಸುಳ್ಯ ಸ್ವರ್ಣಂ ಜ್ಯುವೆಲ್ಲರಿ ಪಾಲುದಾರ ರಾದ ಪ್ರವೀಣ್ ಬಿ. ಗೌಡ, ಸಂಜೀವ ನಾಯ್ಕ, ಸಂದೀಪ್ ಸುಳ್ಯ ಸಾಂದೀಪ್ ಶಾಲೆ ಅಧ್ಯಕ್ಷ ಎಂ.ಬಿ.ಸದಾಶಿವ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ದ.ಕ.ಜೇನು ಸೊಸೈಟಿ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಚೈತ್ರಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಎಲ್.ಎಸ್. ಕ್ಯಾಟರಿಂಗ್ ನ ಲತೀಫ್, ವಾವ ಸಿಲ್ಕ್ಸ್ ಮಾಲಕ ಯೂಸುಫ್, ಸುದ್ದಿ ಅಜ್ಜಾವರ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಕೊಡೆಂಕಿರಿ ವೇದಿಕೆಯಲ್ಲಿದ್ದರು.
ಸಮಾರೋಪ ಸಮಾರಂಭದಲ್ಲಿ ಎಲ್.ಎಸ್. ಕ್ಯಾಟರಿಂಗ್ ನ ಲತೀಫ್ ರನ್ನು ಗೌರವಿಸಲಾಯಿತು.
ಪತ್ರಕರ್ತರರಾದ ಯಶ್ವಿತ್ ಕಾಳಮ್ಮನೆ, ಪ್ರಜ್ಞಾ ಎಸ್ ನಾರಾಯಣ ಅಚ್ರಪ್ಪಾಡಿ, ದುರ್ಗಾಕುಮಾರ್ ನಾಯರ್ ಕೆರೆ, ಗಂಗಾಧರ ಮಟ್ಟಿ, ರಮೇಶ್ ನೀರಬಿದಿರೆ, ಪೂಜಾಶ್ರೀ ವಿತೇಶ್, ಮಿಥುನ್ ಕರ್ಲಪ್ಪಾಡಿ, ಗಿರೀಶ್ ಅಡ್ಪಂಗಾಯ, ಗಂಗಾಧರ್ ಕಲ್ಲಪಳ್ಳಿ, ಜಯಶ್ರೀ ಕೊಯಿಂಗೋಡಿ, ಈಶ್ವರ ವಾರಣಾಸಿ, ಹಸೈನಾರ್ ಜಯನಗರ, ಶಿವಪ್ರಸಾದ್ ಆಲೆಟ್ಟಿ, ಗಣೇಶ್ ಮಾವಂಜಿ, ಜಯಪ್ರಕಾಶ್ ಕುಕ್ಕೆಟ್ಟಿ, ಸತೀಶ್ ಹೊದ್ದೆಟ್ಟಿ, ಲೋಕೇಶ್ ಪೆರ್ಲಂಪಾಡಿ, ದಯಾನಂದ ಕಲ್ನಾರ್ ಕವನ ವಾಚಿಸಿದರು.
ಗಂಗಾಧರ್ ಕಲ್ಲಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ಬಹುಮಾನ ವಿತರಣೆ : ಆಟೋಟ ಸ್ಪರ್ಧೆಗಳು ಮುಗಿದ ಬಳಿಕ ಬಹುಮಾನ ವಿತರಣೆ ನಡೆಯಿತು.
ಸುದ್ದಿ ಅಜ್ಜಾವರ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಕೊಡೆಂಕಿರಿ, ಸುದ್ದಿಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ, ಸುದ್ದಿ ಮಾಹಿತಿ ವಿಭಾಗ ಮುಖ್ಯಸ್ಥರಾದ ಕೃಷ್ಣ ಬೆಟ್ಟ, ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ, ಚೈತ್ರಾ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿಭಟ್, ಗದ್ದೆಯ ಮಾಲಕರಾದ ಬಾಲಕೃಷ್ಣ ನಾಯ್ಕ್ ರವರು ಬಹುಮಾನ ವಿತರಿಸಿದರು.
ಶರೀಫ್ ಜಟ್ಟಿಪಳ್ಳ ಬಹುಮಾನ ಪಟ್ಟಿ ವಾಚಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯಶ್ವಿತ್ ಕಾಳಮ್ಮನೆ ವಂದಿಸಿದರು.










