ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವರಮಹಾಲಕ್ಷ್ಮೀ ಪೂಜೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ವರಮಹಾಲಕ್ಷ್ಮೀ ಪೂಜೆಯನ್ನು ಆ.8 ರಂದು ಆಚರಿಸಲಾಯಿತು.

ದೇವಸ್ಥಾನದ ಶೃಂಗೇರಿ ಮಠದಲ್ಲಿ ವರಮಹಾಲಕ್ಷ್ಮೀ ಪೂಜೆಯು ಪುರೋಹಿತ ಪ್ರಸನ್ನ ಹೊಳ್ಳ ನೇತೃತ್ವದಲ್ಲಿ ನಡೆಯಿತು. ಶ್ರೀ ದೇವಳದ ನೌಕರರ ವೃಂದ ಸೇರಿದಂತೆ ಊರ ಮತ್ತು ಪರವೂರ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಆರಂಭದಲ್ಲಿ ಮಾತೆಯರು ಕಲಶದೊಂದಿಗೆ ದರ್ಪಣತೀರ್ಥ ನದಿಗೆ ತೆರಳಿದರು.ಅಲ್ಲಿ ಪುರೋಹಿತರು ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು.ಅಲ್ಲದೆ ನದಿಗೆ ಹಾಲು ಮತ್ತು ಯಮುನೆಗೆ ಪಂಚಾಮೃತ ಸಮರ್ಪಿಸಲಾಯಿತು. ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಮೆರವಣಿಗೆಯೊಂದಿಗೆ ಶೃಂಗೇರಿ ಮಠಕ್ಕೆ ಸಾಂಪ್ರದಾಯಿಕವಾಗಿ ಬರಲಾಯಿತು. ತದನಂತರ ಶೃಂಗೇರಿ ಮಠದಲ್ಲಿ ಯಮುನೆಯನ್ನು ಪ್ರತಿಷ್ಠಾಪಿಸಲಾಯಿತು.ನಂತರ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಪುರೋಹಿತ ಪ್ರಸನ್ನ ಹೊಳ್ಳ ಪೂಜೆ ನೆರವೇರಿಸಿದರು.


ನಂತರ ಸರ್ವರಿಗೂ ಪ್ರಸಾದ ವಿತರಿಸಲಾಯಿತು.ಪ್ರಸಾದದೊಂದಿಗೆ ಶ್ರೀ ದೇವಳದ ವತಿಯಿಂದ ಕುಂಕುಮ, ಬಳೆ, ರವಿಕೆ ಕಣವನ್ನು ಮಹಿಳಾ ಭಕ್ತರಿಗೆ ವಿತರಿಸಲಾಯಿತು.ಪೂಜೆಯ ವೇಳೆ ಶ್ರೀ ದೇವಳದ ನೌಕರರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.


ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ,
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ ಸೇರಿದಂತೆ ದೇವಳದ ಎಲ್ಲಾ ಮಹಿಳಾ ಸಿಬ್ಬಂದಿಗಳು, ನೌಕರ ವೃಂದ, ಊರ ಮತ್ತು ಪರವೂರ ಭಕ್ತರು ಭಾಗವಹಿಸಿದ್ದರು.