
ಸುಳ್ಯ ನಗರದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ನೀರು ಚಿಮ್ಮುತ್ತಿರುವ ಘಟನೆ ನಡೆದಿದೆ. ಈ ಮೊದಲು ಕೂಡ ಕೆಲವು ತಿಂಗಳ ಹಿಂದೆ ಇದೇ ನೀರಿನ ಪೈಪ್ ಒಡೆದು ನೀರು ಹೊರವರುತ್ತಿದ್ದು, ಹಲವು ಸಮಯ ಸಮಸ್ಯೆ ಉಂಟಾಗಿತ್ತು.

ಅದನ್ನು ದುರಸ್ಥಿ ಪಡಿಸಿ ಆರು ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಮತ್ತೊಮ್ಮೆ ಪೈಪ್ ಒಡೆದು ನೀರು ಬೃಹದಾಕಾರದಲ್ಲಿ ಹೊರ ಬರುತ್ತಿದ್ದು ಇದಕ್ಕೆಲ್ಲ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.


















