ಪಂಜದ ರಿಕ್ಷಾ ತಂಗುದಾಣದಲ್ಲಿ ಬಿ ಯಂ ಯಸ್ ಆಟೋ ಚಾಲಕರ ಸಂಘ ಪಂಜ ಘಟಕ ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್(ರಿ.) ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆ.15 ರಂದು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಜತ್ತಪ್ಪ ಗೌಡ ತೋಟ ನೆರವೇರಿಸಿದರು.
















ಸಭಾಧ್ಯಕ್ಷತೆಯನ್ನು ಬಿ ಯಂ ಯಸ್ ಆಟೋ ಚಾಲಕರ ಸಂಘ ಪಂಜ ಘಟಕ ಇದರ ಅಧ್ಯಕ್ಷ ಬಾಲಕೃಷ್ಣ ಸಂಪ್ಯಾಡಿ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆಗಿರುವ ನಾರಾಯಣ ಕೃಷ್ಣನಗರ, ಸದಸ್ಯರಾದ ಶರತ್ ಕುದ್ವ, ಚಂದ್ರಶೇಖರ್ ದೇರಾಜೆ ಹಾಗೂ ಸುಳ್ಯ ಯವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪವನ್ ಪಲ್ಲತ್ತಡ್ಕ, ಸುಳ್ಯ ಯವಜನ ಸಂಯುಕ್ತ ಮಂಡಳಿ ನಿರ್ದೇಶಕ ಜನಾರ್ದನ ನಾಗತೀರ್ಥ ಮತ್ತು ಬಿ ಯಂ ಯಸ್ ಆಟೋ ಚಾಲಕರ ಸಂಘ ಪಂಜ ಘಟಕದ ಎಲ್ಲಾ ಪದಾಧಿಕಾರಿಗಳು , ಸದಸ್ಯರು , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದಾಮೋದರ ನೇರಳ ನಿರೂಪಿಸಿದರು. ಗಣೇಶ್ ನಾಗತೀರ್ಥ ಸ್ವಾಗತಿಸಿದರು ಜೀನತ್ ಚೀಮುಳ್ಳು ವಂದಿಸಿದರು. ನಂತರ ಕಾಮಧೇನು ಸ್ವೀಟ್ ಸೆಂಟರ್ ನ ಮಾಲಕರದ ನಾಗೇಶ್ ನಾವೂರು ಸಿಹಿ ತಿಂಡಿ ಹಂಚಿದರು.










