ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ 79ನೇ ಸ್ವಾತಂತ್ರ‍್ಯೋತ್ಸವ ಆಚರಣೆ

0

ಬದ್ರಿಯಾ ಜುಮ್ಮಾ ಮಸೀದಿ, ನುಸ್ರತುಲ್ ಇಸ್ಲಾಂ ಮದರಸ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅರಂತೋಡು ಇದರ ಜಂಟಿ ಆಶ್ರಯದಲ್ಲಿ 79 ನೇ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು. ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಖತೀಬ್‌ರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಸಂದೇಶ ಭಾಷಣ ಮಾಡಿದರು.

ಸದರ್ ಮುವಲ್ಲಿಂ ಅಶ್ರಫ್ ಮುಸ್ಲಿಯಾರ್ ಆಡ್ಕಾರ್ ದುವಾ ನೆರವೇರಿಸಿದರು. ನಿವೃತ ಉಪನ್ಯಾಸಕ ಅಬ್ದುಲ್ಲ ಮಾಸ್ಟರ್ ಮಾತನಾಡಿ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಪ್ರೇಮದ ಮಹತ್ವ ಬಗ್ಗೆ ಮಾತನಾಡಿದರು.

ಜಮಾ ಅತ್ ಉಪಾಧ್ಯಕ್ಷ ಹಾಜಿ ಕೆ ಎಂ ಮೊಹಮ್ಮದ್, ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ , ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಧಿಕಾರಿ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಬ್ದುಲ್ ಖಾದರ್ ಪಟೇಲ್, ಮೊಯಿದಿನ್ ಕುಕ್ಕುಂಬಳ , ಸಂಶುದ್ದೀನ್ ಪೆಲ್ತಡ್ಕ , ಹನೀಫ್ ಕುನ್ನಿಲ್, ನಿವೃತ ಸೈನಿಕ ಫಸಿಲು, ಟಿ.ಎಂ.ಜಾವೇದ್ ತೆಕ್ಕಿಲ್, ಎಸ್.ಕೆ.ಎಸ್.ಎಸ್. ಎಫ್ ಅದ್ಯಕ್ಷ ಜುಬೈರ್, ಉಮ್ಮರ್ ಎ , ಕಾರ್ಯದರ್ಶಿ ಸಂಶುದ್ದೀನ್, ತಾಜುದ್ದೀನ್ ಅರಂತೋಡು, ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಖಾದರ್ ಮೊಟೆಂಗಾರ್, ಆಶಿಕ್ ಕುಕ್ಕುಂಬಳ, ಮಿಸ್ಬಾ, ಮುಹ್ಸಿನ್ , ಮುಝಮಿಲ್ ಕುಕ್ಕುಂಬಳ, ಇಕ್ಬಾಲ್ , ಎಸ್ ಕೆ ಬಿವಿ ವಿದ್ಯಾರ್ಥಿಗಳು, ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆಎಂ ಮೂಸಾನ್ ಸ್ವಾಗತಿಸಿ, ಅಮೀರ್ ಕುಕ್ಕುಂಬಳ ವಂದಿಸಿದರು.