ಕೋನಡ್ಕಪದವು ಅಂಗನವಾಡಿ ಕೇಂದ್ರದಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಕೋನಡ್ಕಪದವು ಅಂಗನವಾಡಿ ಕೇಂದ್ರದಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಲಿಂಗಪ್ಪ ಗೌಡ ಮೂರ್ಜೆ ಇವರು ನೆರವೇರಿಸಿ ದರು.

ಈ ಸಂದರ್ಭದಲ್ಲಿ ಅಡ್ಕಾರು ಎಲೆಕ್ಟ್ರಾನಿಕ್ಸ್ ನ ಮಾಲೀಕರಾದ ದಿನೇಶ್ ಅಡ್ಕಾರು, ಬಿ ಯಂ ಎಸ್ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಗೋಪಾಲ ಪದವು ಹಾಗೂ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಅಕ್ಷತ, ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ನಿವೇದಿತಾ ಸ್ವಾಗತಿಸಿ, ಪ್ರಾರ್ಥಿಸಿ, ವಂದಿಸಿದರು. ಸಹಾಯಕಿ ಶಾರದಾ ಸಹಕರಿಸಿದರು. ಕೇಂದ್ರದ ಹಳೆ ವಿದ್ಯಾರ್ಥಿಗಳು ಸಿಹಿತಿಂಡಿಯ ಪ್ರಯೋಜಕರಾಗಿ ಸಹಕರಿಸಿದರು.