ಸಂಪಾಜೆ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ಸಂಪಾಜೆ: ಸಂಪಾಜೆ ಬದ್ರ್ ಜುಮಾ ಮಸೀದಿಯಲ್ಲಿ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು. ಬದ್ರ್ ಜಮಾಅತ್ ಅಧ್ಯಕ್ಷ ಜನಾಬ್ ಮುಹಮ್ಮದ್ ಹಮೀದಿಯಾ ಧ್ವಜಾರೋಹಣ ನೆರವೇರಿಸಿದರು.

ಸ್ಥಳೀಯ ಖತೀಬ್ ಲುಖ್ಮಾನುಲ್ ಹಕೀಂ ಫೈಝಿ ಅಲ್ ಮಅ್‌ಬರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಧರ್ಮದ ದೃಷ್ಟಿಯಿಂದ ಅಳೆಯುವ ಪ್ರಯತ್ನವು ರಾಷ್ಟ್ರದ ಆತ್ಮಕ್ಕೆ ಅಪರಾಧ ಎಂದು ಹೇಳಿದರು. ಬದ್ರ್ ಜಮಾಅತ್ ಅಧ್ಯಕ್ಷ ಜನಾಬ್ ಮುಹಮ್ಮದ್ ಹಮೀದಿಯಾ ಸ್ವಾತಂತ್ರ್ಯದ ನಿಜವಾದ ಅರ್ಥವು ಪ್ರತಿಯೊಬ್ಬ ನಾಗರಿಕನು ಪರಸ್ಪರ ಗೌರವದಿಂದ ಮತ್ತು ಶಾಂತಿಯಿಂದ ಬದುಕುವಲ್ಲಿ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಝಾಹಿಂ ಕನ್ನಡ ಭಾಷಣ, ತಾಜುದ್ದೀನ್, ಸಿನಾನ್ ಮತ್ತು ನಿಹಾದ್ ಕನ್ನಡ ಹಾಡು ಹಾಗೂ ಇಷಲ್ ಇಂಗ್ಲಿಷ್ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಕೆ.ಕೆ. ಅಬ್ಬಾಸ್, ಕೋಶಾಧಿಕಾರಿ ಅಬ್ದುಲ್ ಖಾದರ್, ಮಾಜಿ ಉಪಾಧ್ಯಕ್ಷರು ಅಬ್ದುಲ್ ರಹ್ಮಾನ್, ಸ್ವಲಾತ್ ಕಮಿಟಿ ಅಧ್ಯಕ್ಷರು ಅಬ್ದುಲ್ ಖಾದರ್, ಜಮಾಅತ್ ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮದ್ರಸ ಮುಅಲ್ಲಿಂ ಆರಿಫ್ ಫೈಝಿ ಅಲ್ ಮಅ್‌ಬರಿ ಸ್ವಾಗತಿಸಿದರು. ಜಮಾಅತ್ ಸದಸ್ಯರಾದ ಮುಹಮ್ಮದ್ ಹನೀಫ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಣೆ ನಡೆಯಿತು.