
ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಆಡಳಿತ ಸಮಿತಿ ಮತ್ತು ಮುತ್ತುಶ್ರೀ ಫ್ರೆಂಡ್ಸ್ ಕ್ಲಬ್ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಕೆ.ವಿ.ಜಿ ಆಯುರ್ವೇದಿಕ್ ಕಾಲೇಜ್ ಪ್ರೊಫೆಸರ್
ಡಾ.ಅವಿನಾಶ್ ರವರು ನೆರವೇರಿಸಿದರು.
















ಈ ಸಂದರ್ಭದಲ್ಲಿ ವಿಷ್ಣು ಯುವಕ ಮಂಡಲ ಮೇನಾಲ ಇದರ ಅಧ್ಯಕ್ಷರಾದ ರಂಜಿತ್ ರೈ, ಅಜ್ಜಾವರ ಗ್ರಾ.ಪಂ ಸದಸ್ಯೆ ಶ್ರೀಮತಿ ದಿವ್ಯ ಪಡ್ಡಂ ಬೈಲು, ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ನಾಚಿ ಮುತ್ತು, ಅರ್ಚಕರಾದ ಯೋಗರಾಜ್ ಹಾಗೂ ಹಿರಿಯರಾದ ದಯಾಳನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಜನತೆಗೆ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವ ಡಾ.ಅವಿನಾಶ್ ರವರನ್ನು ಮೇದಿನಡ್ಕ ಪರಿಸರದ ನಾಗರಿಕರ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಪದಾಧಿಕಾರಿಗಳು, ಮುತ್ತುಶ್ರೀ ಫ್ರೆಂಡ್ಸ್ ಕ್ಲಬ್ ಯುವಕರು ಮೇದಿನಡ್ಕ ಅಂಗನವಾಡಿ ಕಾರ್ಯಕರ್ತೆ ಶಿವಾಪಾಕ್ಯಂ, ಸಹಾಯಕಿ ಶ್ರೀಮತಿ ಧನ್ಯ , ಉಪಸ್ಥಿತರಿದ್ದರು . ವಿನೋದ್ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು, ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಮೇದಿನಡ್ಕ, ಮಿಥುನ್, ರಾಘವ, ಉಮೇಶ್, ಸ್ವಸ್ತಿಕ್, ಭಾಸ್ಕರನ್, ಪ್ರವೀಣ್ ಮೇದಿನಡ್ಕ ,ದಿನೇಶ್ ನಾಂಗುಳಿ,ಸುನೀಲ್ ನಾಂಗುಳಿ ಕಾರ್ಯಕ್ರಮಕ್ಕೆ ಸಹಕರಿಸಿದರು.










