
ಕಾರ್ಯರ್ತೋಡಿ ಅಂಗನವಾಡಿಯಲ್ಲಿ 79 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶ್ರೀ ರಕ್ತೇಶ್ವರಿ ಕ್ಷೇತ್ರ ಸೂರ್ತಿಲ ಕಾರ್ಯರ್ತೋಡಿ ಸಾನಿಧ್ಯ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಕೆಕ್ಕಡ್ಕ ಅಧ್ಯಕ್ಷ ವಹಿಸಿ ಧ್ವಜಾರೋಹಣ ವನ್ನು ನೆರವೇರಿಸಿದರು. ವೇದಿಕೆಯಲ್ಲಿ ರಕ್ತೇಶ್ವರಿ ಕ್ಷೇತ್ರದ ನಿಕಟ ಪೂರ್ವ ಅಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಧಿಕಾರಿ ಮಾದವ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರುತಿ ಮಂಜುನಾಥ, ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷ ಕಲಾವತಿ ತೀರ್ಥರಾಮ,ಬಾಲವಿಕಾಸ ಸಮಿತಿ ಅಧ್ಯಕ್ಷೆ ಪವಿತ ಲೋಹಿತ್, ಅಂಗನವಾಡಿ ಕಾರ್ಯಕರ್ತೆ ಲತಾ ರಾಧಾಕೃಷ್ಣ ಉಪಸ್ಥಿತಿದ್ದರು. ಲತಾ ರಾಧಾಕೃಷ್ಣ ಸ್ವಾಗತಿಸಿ, ಜ್ಯೋತಿ ಹರೀಶ್ ವಂದಿಸಿ, ಶ್ರೀ ನಿಧಿ ಮಹಿಳಾ ಮಂಡಳದ ನಿಕಟಪೂರ್ವ ಅಧ್ಯಕ್ಷೆ ಹೇಮಾವೇಣುಗೋಪಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

























