















ಗೂನಡ್ಕ ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ಯ ದಿನವನ್ನು ಅತ್ಯಂತ ವಿಜ್ರಂಭಣೆಯಿAದ ಆಚರಿಸಲಾಯಿತು. ಧ್ವಜಾರೋಹಣವನ್ನು ಸೋಮಶೇಖರ್ ಕೊಯಿಂಗಾಜೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ ವಹಿಸಿದರು. ವೇದಿಕೆಯಲ್ಲಿ ಸೋಮಶೇಖರ ಕೊಯಿಂಗಜೆ, ಎಸ್. ಪಿ ಲೋಕನಾಥ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಮಾದವ, ಮಹಮದ್ ಕುಂಞÂ ಗೂನಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೆಲು, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸೌಮ್ಯ ಸತ್ಯಜಿತ್ ಪೆರಡ್ಕ , ಅಬೂಬಕ್ಕರ್ ಸಿದ್ದೀಕ್ ಸೇರಿದಂತೆ ಮುಂತಾದವರು ಉಪಸ್ಥಿತಿದ್ದರು. ನಿವೃತ ಶಿಕ್ಷಕಿ ಶ್ರೀಮತಿ ಯಶೋದಾ ನಿರ್ಮಲಚಂದ್ರ ಮತ್ತು ಶಿಕ್ಷಕಿ ಶ್ರೀಮತಿ ಭವಾನಿ ಕರುಣಾಕರ ಪಿ. ಎ ಯವರನ್ನು ಶಾಲಾ ಸಮಿತಿ ವತಿಯಿಂದ ಗೌರವಿಸಲಾಯಿತು. ಶಾಲಾ ಮುಖ್ಯ ಅಧ್ಯಾಪಕ ಹನುಮಂತಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.










