















ರಜಾರಂಪುರ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ರವೀಂದ್ರ ದೊಡ್ಡಡ್ಕ ನೆರವೇರಿಸಿದರು. ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ್, ಎಸ್.ಡಿ.ಎಂ.ಸಿ.ಅಧ್ಯಕ್ಷ ರವೀಂದ್ರ , ಗ್ರಾಮ ಪಂಚಾಯತ್ ಸದಸ್ಯರಾದ, ವಿಮಲ ಪ್ರಸಾದ್, ಅನುಪಮ , ನಿವೃತ ಸೈನಿಕ ಶೇಷಪ್ಪ, ಕೊರಗಜ್ಜ ದೇವಸ್ತಾನದ ಮುಖ್ಯಸ್ಥ ಚಂದ್ರ ಶೇಖರ , ಎಸ್.ಡಿ.ಎಂ.ಸಿ.ಸದಸ್ಯರು, ಅಂಗನವಾಡಿ ಶಿಕ್ಷಕರು, ಪೋಷಕ ವೃಂದ ದವರು ಶಾಲೆಯ ವಿದ್ಯಾರ್ಥಿ ಗಳು ಭಾಗವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಭವಾನಿ ಶಂಕರ ಸ್ವಾಗತಿಸಿ ಶಿಕ್ಷಕಿ ದೇವಕಿ ವಂದಿಸಿದರು.ಸಹ ಶಿಕ್ಷಕ ನಾಗ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










