







ಯೇನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಆ. 17ರಂದು ನಡೆಯಿತು. ಪೂರ್ಣಚಂದ್ರ ತುಂಬತ್ತಾಜೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದು ಸಂಜೆ ಸಮರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ಲಕ್ಷ್ಮಣಗೌಡ ಸಂಕಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಭವ್ಯಮೋಹಿತ್ ಜೇನುಕೋಡಿ, ಕೆಎಂಎಫ್ ನಿರ್ದೇಶಕ ಭರತ್ ನೆಕ್ರಾಜೆ, ಯೇನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಮಲ ಮೋಹನ್ ಕೋಟಿಗೌಡನಮನೆ, ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾದ ಹರಿಯಪ್ಪ ಗೌಡ ಬಾಲಾಡಿ ವೇದಿಕೆಯಲ್ಲಿದ್ದರು. ಸಚಿನ್ ಕುಪ್ಪಪ್ಪನಮನೆ ಸ್ವಾಗತಿಸಿ, ಹವೀನ್ ಬಾಲಾಡಿ ವಂದಿಸಿದರು. ಮೋಹಿತ್ ಜೇನುಕೋಡಿ ಹಾಗೂ ರಾಕೇಶ್ ಬಾಲಾಡಿ ಕಾರ್ಯಕ್ರಮ ನಿರೂಪಿಸಿದರು.










