ಮಡಪ್ಪಾಡಿ: ಪೂಂಬಾಡಿ ಪರಿಸರದಲ್ಲಿ ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ, ಕೃಷಿ ಹಾನಿ

0

ತೋಟದಲ್ಲಿ ಇರಿಸಿದ್ದ ದ್ವಿಚಕ್ರ ವಾಹನಕ್ಕೂ ಹಾನಿ

ಮಡಪ್ಪಾಡಿ ಗ್ರಾಮದ ಪೂಂಬಾಡಿಯಲ್ಲಿ ಒಂಟಿ ಸಲಗವೊಂದು ಕೃಷಿ ತೋಟಕ್ಕೆ ದಾಳಿ ನಡೆಸಿ ಅಪಾರ ಹಾನಿ ಮಾಡಿರುವ ಘಟನೆ ವರದಿಯಾಗಿದೆ.

ಪೂಂಬಾಡಿ ಗಣಪಯ್ಯ ಗೌಡರವರ ತೋಟಕ್ಕೆ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ದಾಳಿ ಮಾಡಿದ ಒಂಟಿ ಸಲಗ 10ಹೆಚ್ಚು ತೆಂಗಿನ ಮರ, ಅಪಾರ ಬಾಳೆ ಗಿಡ ನಾಶ ಮಾಡದೆ.

ಅವರ ಮನೆಯ ಬಳಿ ತೋಟದಲ್ಲಿ ದಾರಿ ಮಧ್ಯೆ ತೋಡು ಹರಿಯುತ್ತಿದ್ದು, ಅಲ್ಲಿ ದ್ವಿಚಕ್ರ ದಾಟಿಸಲು ಸಾಧ್ಯವಾಗದ ಸಂದರ್ಭ ತೋಡಿನ ಒಂದು ಬದಿ ತೋಟದಲ್ಲಿ ಇರಿಸಿ ಹೋಗಿದ್ದಾರೆ. ಅದೇ ದಾರಿಯಲ್ಲಿ ಬಂದ ಒಂಟಿ ಸಲಗ ದ್ವಿಚಕ್ರ ವಾಹನಕ್ಕೂ ಹಾನಿ ಮಾಡಿದೆ.

ಪೂಂಬಾಡಿ ಪರಿಸರದಲ್ಲಿ ಕಳೆದ ಕೆಲ ಸಮಯದಿಂದ ನಿರಂತರ ಆನೆ ದಾಳಿ ನಡೆಯುತ್ತಿದ್ದು, ಅಡಿಕೆಗೆ ಹಳದಿ ರೋಗ ಬಾಧಿಸಿದ ಬೆನ್ನಲ್ಲೇ ಆನೆ ದಾಳಿ ಕೃಷಿಕರನ್ನು ಇನ್ನಷ್ಟು ಆತಂಕಕ್ಕೆ ಈಡು ಮಾಡಿದೆ.