ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳು

0


“Mouele Shotakan Karate Do Association India & South Asia” ಅಯೋಜಿಸಿರುವಂತಹ ಶಿವಮೊಗ್ಗ ಓಪನ್ ಆರನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಟಾ ವಿಭಾಗದಲ್ಲಿ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯ ಐದನೇ ತರಗತಿಯ ವಿದ್ಯಾರ್ಥಿಗಳಾದ ಕುನಾಲ್ ಎನ್ ಎಲ್ ಪ್ರಥಮ, ಆರ್ಯನ್ ಕೆ ಎಸ್ ದ್ವಿತೀಯ, ತಶ್ವಿಕ್ ಎಂ ದ್ವಿತೀಯ , ಶ್ರವಣ್ ಕೊಯಿಂಗೋಡಿ ತೃತೀಯ ಹಾಗೂ 6ನೇ ತರಗತಿಯ ವಿದ್ಯಾರ್ಥಿಯಾದ ಅದ್ವೈತ್ ಸಿ ಕುಮಾರ್ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ. ಇವರಿಗೆ ಕರಾಟೆ ತರಬೇತುದಾರರಾದ ಚಂದ್ರಶೇಖರ ಕನಕಮಜಲುರವರು ತರಬೇತಿಯನ್ನು ನೀಡಿರುತ್ತಾರೆ.