ಸುಳ್ಯದಲ್ಲಿ ಅಗ್ರಿ ಟೂರಿಸಂ ಘಟಕಕ್ಕೆ ಚಿಂತನೆ : ವೀರಪ್ಪ ಗೌಡ ಕಣ್ಕಲ್
ಸುಳ್ಯ ರೈತ ಉತ್ಪಾದಕ ಕಂಪೆನಿಯ 4 ನೇ ವಾರ್ಷಿಕ ಮಹಾಸಭೆಯು ಆ.20ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಬೆಳವಣಿಗೆ, ಯೋಜನೆಗಳನ್ನು ವಿವರಿಸಿದರಲ್ಲದೆ ಸುಳ್ಯದಲ್ಲಿ ಅಗ್ರಿ ಟೂರಿಸಂ ಘಟಕಕ್ಕೆ ಚಿಂತನೆ ಹಾಕಿಕೊಂಡಿರುವುದಾಗಿ ಹೇಳಿದರು.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಡಿ.ಮಂಜುನಾಥ್ ಮುಖ್ಯ ಅತಿಥಿ ಗಳಾಗಿದ್ದು ಕೊಳೆ ರೋಗ, ಸುರುಳಿ ಕೊಳೆರೋಗ ನಿಯಂತ್ರಣ ಇತ್ಯಾದಿ ವಿಚಾರ ಗಳು ಮಾಹಿತಿ ನೀಡಿದರು.
ಕಂಪೆನಿಯ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ದೇವರಾಜ್ ಆಳ್ವ ಹಾಗೂ ಸಂತೋಷ್ ಉಬರಡ್ಕರವರು ರಾಜೀನಾಮೆ ನೀಡಿದ್ದು, ಅವರ ಬದಲಿಗೆ
ಶಶಿಧರ ನಾಯರ್ ಉಬರಡ್ಕ, ಕುಶಾಲಪ್ಪ ಪೆರುವಾಜೆಯವರನ್ನು ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಕಂಪನಿಯಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸಿದದರೆಂಬ ಕಾರಣಕ್ಕೆ ಕೃಷಿಕರಾದ ಮಂಜುನಾಥ್, ಕೇಶವ ಬಿ.ಡಿ., ವಿಶಾಲ ರೈಯವರನ್ನು ಪುರಸ್ಕರಿಸಲಾಯಿತು. ಕೃಷಿಕರಿಗೆ ಸೇವೆ ನೀಡುತ್ತಿದ್ದಾರೆಂಬ ಕಾರಣಕ್ಕೆ ಬಾಲಕೃಷ್ಣ ಬೆಳ್ಳಾರೆಯವರಿಗೆ ಕೃಷಿ ಕಾರ್ಮಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
















ತಾಂತ್ರಿಕ ಸಲಹೆಗಾರರಾದ ದೀಪಕ್, ಸಂದೇಶ್, ಉದಯಕುಮಾರ್, ಆಂತರಿಕ ಲೆಕ್ಕಪರಿಶೋಧಕರಾದ ಆನಂದ ಖಂಡಿಗರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ರೈತ ಉತ್ಪಾದಕ ಕಂಪೆನಿಗಳ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ವೀರಪ್ಪ ಗೌಡ ಕಣ್ಕಲ್ ರನ್ನು ಸನ್ಮಾನಿಸಲಾಯಿತು.
ಅತೀ ಹೆಚ್ಚು ವ್ಯವಹಾರ ನಡೆಸಿದ ಮಡಪ್ಪಾಡಿ ಸಹಕಾರ ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿಯವರನ್ನು ಗೌರವಿಸಲಾಯಿತು.
ಕಂಪೆನಿ ನಿರ್ದೇಶಕರಾದ ಜಯರಾಮ ಮುಂಡೋಳಿಮೂಲೆ ಅಜ್ಜಾವರ, ಶ್ರೀಶಕುಮಾರ್ ಮಾಯಿಪಡ್ಕ ಅಮರಮುಡ್ನೂರು, ಸತ್ಯಪ್ರಸಾದ್ ಅಮರಮುಡ್ನೂರು, ಸುರೇಶ್ ರೈ ಬಾಳಿಲ, ರಾಮಕೃಷ್ಣ ಬೆಳ್ಳಾರೆ, ಎಂ.ಡಿ. ವಿಜಯಕುಮಾರ್, ಭಾಸ್ಕರ ನಾಯರ್ ಅರಂಬೂರು, ಗೋವಿಂದ ಎ ಮರ್ಕಂಜ, ಧರ್ಮಪಾಲ ಎಲ್ ಐವರ್ನಾಡು, ಗೌರವ ಸಲಹೆಗಾರರಾದ ಡಾ.ಎಸ್.ರಂಗಯ್ಯ ವೇದಿಕೆಯಲ್ಲಿ ಇದ್ದರು.

ನಿರ್ದೇಶಕ ಲೋಹಿತ್ ಕೊಡಿಯಾಲ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಕೆ. ವರದಿ ಮಂಡಿಸಿದರು. ನಿರ್ದೇಶಕ ನೇತ್ರಕುಮಾರ್ ಕನಕಮಜಲು ವಂದಿಸಿದರು. ಶ್ರೀಮತಿ ಮಧುರಾ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.










